ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಗೊಳಿಸಲು ಒತ್ತಾಯ

Vishwanath S
Updated On : 29 Jan 2014, 11:19 am

ಸಿಂಧನೂರು: ತಾಲೂಕಿನ ದೀನಸಮುದ್ರ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಚಾಲಕರು ಸರ್ಕಾರದಿಂದ ಸರಬರಾಜು ಆಗುವ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಅವರಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮದ ನಿವಾಸಿಗಳು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ನ್ಯಾಯಬೆಲೆ ಅಂಗಡಿ ಸಂಚಾಲಕ ಹುಲಗಪ್ಪ ಮರಿಯಪ್ಪ ಎನ್ನುವಾತ ಪ್ರತಿ ತಿಂಗಳು ಸರಬರಾಜು ಆಗುವ ಪಡಿತರ ಧಾನ್ಯಗಳನ್ನು ಅರ್ಹರಿಗೆ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಒಂದೇ ದಿನದಲ್ಲಿ ಕೇವಲ ಸೀಮೆಎಣ್ಣೆಯನ್ನು ಲೀಟರ್‌ಗೆ 20- 25ರಂತೆ ತಲಾ 2 ಲೀ ನೀಡುತ್ತಿದ್ದು, ಉಳಿದ ದಾಸ್ತಾನನ್ನು ಕಾಳಸಂತೆಯಲ್ಲಿ ಹಲವು ತಿಂಗಳಿನಿಂದ ಮಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಮದ್ಯ ಸೇವಿಸಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾನೆ. ಅಲ್ಲದೇ ತನ್ನನ್ನು ಪ್ರಶ್ನಿಸಿದವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ನಿವಾಸಿಗಳು ದೂರಿದ್ದಾರೆ. ಕೂಡಲೇ ಹುಲಗಪ್ಪನಿಗೆ ನೀಡಿರುವ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಿ ಬೇರೆಯವರಿಗೆ ನೀಡಬೇಕು, ಇನ್ನು ಪ್ರತಿ ತಿಂಗಳು ಕಾರ್ಡ್‌ದಾರರಿಗೆ ನಿಗದಿಯಂತೆ ಪಡಿತರ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ರಾಮಣ್ಣ ವಕೀಲ ಸೇರಿದಂತೆ ಗ್ರಾಮದ ಅನೇಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement