ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಮದ್ಯ ಮಾರಾಟ; ಪ್ರತಿಭಟನೆ

Lingaraj Badiger
Updated On : 30 Jan 2014, 10:52 am

ಸಿಂಧನೂರು: ತಾಲೂಕಿನ ಉದ್ಬಾಳ(ಯು) ಗ್ರಾಪಂ ವ್ಯಾಪ್ತಿಯ ದುರ್ಗಾಕಾಂಪ್‌ನಲ್ಲಿ ಹಲವು ತಿಂಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪ್ರತಿಭಟಿಸಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕ್ಯಾಂಪ್‌ನಲ್ಲಿ ಮದ್ಯವ್ಯಸನಿಗಳಿಂದ ಶಾಂತಿ, ನೆಮ್ಮದಿ ಹಾಳಾಗಿದೆ. ಮದ್ಯ ಮಾರಾಟದ ಅಂಗಡಿ ಬಂದ್ ಮಾಡುವಂತೆ ಮಾರಾಟಗಾರರಿಗೆ ಹೇಳಿದರೆ ಶಾಲೆ, ಅಂಗನವಾಡಿ, ಹೊಟೇಲ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಮೊದಲು ಬಂದ್ ಮಾಡುವಂತೆ ಹೇಳುತ್ತಿದ್ದಾರೆಂದು ಗ್ರಾಮಸ್ಥರು ತಹಸೀಲ್ದಾರರ ಗಮನ ಸೆಳೆದರು.
ಪ್ರತಿನಿತ್ಯ ರಾತ್ರಿ ಕೆಲವರು ಕುಡಿದು ಓಣಿಯಲ್ಲಿ ತಿರುಗುತ್ತಾ ಜನರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಶಾಲೆಯಲ್ಲಿ ಹೋಗಿ ಕುಡಿಯುತ್ತಿದ್ದಾರೆಂದು ಮಹಿಳೆಯರು ಮತ್ತು ಅಲ್ಲಿಯ ನಿವಾಸಿಗಳು ತಹಸೀಲ್ದಾರರಿಗೆ ತಿಳಿಸಿದರು. ಅಬಕಾರಿ ನಿರೀಕ್ಷಕರಿಗೆ ಪತ್ರ ಬರೆದು ರದ್ದುಪಡಿಸಲು ಸೂಚಿಸುವುದಾಗಿ ತಹಸೀಲ್ದಾರರು ಭರವಸೆ ನೀಡಿದರು.
ಸ್ವಸಹಾಯ ಗುಂಪುಗಳ ಮುಖಂಡರಾದ ಯಮನಮ್ಮ ಹರಿಜನ, ದೊಡ್ಡದುರ್ಗಮ್ಮ ನಾಯಕ, ಹನುಮಮ್ಮ ಗುಡದೂರು, ಬಸಲಿಂಗಮ್ಮ, ಡಿಎಸ್‌ಎಸ್ ಮುಖಂಡ ಅಶೋಕ ನಂಜಲದಿನ್ನಿ, ಅಂಬಮ್ಮ ನಾಯಕ ಮತ್ತಿತರರು ಚಳವಳಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement