ಎಸ್ಸೆಸ್ಸೆಲ್ಸಿ ಮಕ್ಕಳ ಫೋನ್-ಇನ್ ಕಾರ್ಯಕ್ರಮ
ಲಿಂಗಸ್ಗೂರು: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡಿಸಲು ವಿಷಯವಾರು ಪೋನ್- ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಇಒ ಶಾಂತಗೌಡ ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯಲಿರುವ ಪೋನ್-ಇನ್ ಕಾರ್ಯಕ್ರಮದಲ್ಲಿ ಜ.29 ರಂದು ಪ್ರಥಮ ಭಾಷೆ ಕನ್ನಡ, ಫೆ.2 ದ್ವಿತೀಯ ಭಾಷೆ ಇಂಗ್ಲಿಷ್, ಫೆ.12 ರಂದು ಗಣಿತ, ಫೆ.19 ರಂದು ವಿಜ್ಞಾನ, ಫೆ.26 ರಂದು ಸಮಾಜ ವಿಜ್ಞಾನ, ಮಾರ್ಚ್ 5ರಂದು ತೃತೀಯ ಭಾಷೆ ಹಿಂದಿ ಹಾಗೂ ಮಾರ್ಚ್ 12 ರಂದು ಉರ್ದು ಮಾಧ್ಯಮ ಇಂಗ್ಲೀಷ್, ಗಣಿತ ಜ್ಞಾನ ವಿಷಯವಾರು ಸಂಪನ್ಮೂಲ ಶಿಕ್ಷಕರ ತಂಡದೊಂದಿಗೆ ನಡೆಸಲಾಗುವುದು.
ವಿದ್ಯಾರ್ಥಿಗಳು ಪ್ರತಿ ವಿಷಯವಾರು ಕ್ಲಿಷ್ಟ ಪ್ರಶ್ನೆಗಳನ್ನು ತಯಾರಿಸಿ ದೂ.08537- 257246, ಮೊ. 9902563976, 9480695329, 9880012460, 9880070764 ಸಂಖ್ಯೆಗಳಿಗೆ ಕರೆ ಮಾಡಿ ಉತ್ತರ ಪಡೆದುಕೊಳ್ಳಬೇಕು. ತಾಲೂಕಿನ ಎಲ್ಲ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ನಿಗದಿತ ವೇಳಾ ಪಟ್ಟಿಯನ್ನು ಮಕ್ಕಳಿಗೆ ತಿಳಿಸಬೇಕೆಂದು ಕೋರಿದ್ದಾರೆ.