ಕಾಂಗ್ರೆಸ್ ಪದಾಧಿಕಾರಿಗಳು
ರಾಯಚೂರು: ಜಿಲ್ಲಾ ಕಾಂಗ್ರೆಸ್ನ ಪರಿಶಿಷ್ಟ ಜಾತಿ ವಿಭಾಗದ ನೂತನ ಪದಾಧಿಕಾರಿಗಳನ್ನು ನೇಮಿಸಿ ರಾಜ್ಯಾಧ್ಯಕ್ಷ ಎನ್. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿಗೆ ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಚಲುವಾದಿ, ರಾಮಪ್ಪ ಚಲುವಾದಿ, ಜಿಲ್ಲಾ ಸಂಚಾಲಕರಾಗಿ ರತ್ನಾಕರ್, ವಿರೂಪಾಕ್ಷಿ ಪತ್ತೆಪೂರ್, ಡಾಕೂನಾಯ್ಕ್, ಅಮರೇಶ್ ಚೌವ್ಹಾಣ್ ನೇಮಕಗೊಂಡಿದ್ದಾರೆ. ಅದೇ ರೀತಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರಮ್ಮ, ವಾಸುದೇವ್, ಸುನೀತಾ, ರಾಘವೇಂದ್ರ, ವಿಜಯಕುಮಾರ ಅಕ್ಕರಿಕಿ, ಮಲ್ಲಪ್ಪ ಚಲುವಾದಿ, ನಿಂಗರಾಜ್, ಗಂಗಪ್ಪ ಬಿಲ್ಲವ್, ಶಾಂತಕುಮಾರ್, ಹನುಮಂತ ಭೋವಿ, ಈರೇಶ್, ಗಂಗಾಧರ, ಉರುಕುಂದಾ, ಹನುಮಂತ ರಾಯಚೂರು ಹಾಗೂ ತಿಮ್ಮಯ್ಯ ನೇಮಕಗೊಂಡಿದ್ದಾರೆಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಬ್ಲಾಕ್ ಅಧ್ಯಕ್ಷರು: ಅದೇ ರೀತಿ ಪರಿಶಿಷ್ಟ ಜಾತಿ ವಿಭಾಗದ ವಿಧಾನಸಭೆ ಕ್ಷೇತ್ರವಾರು ಬ್ಲಾಕ್ ಅಧ್ಯಕ್ಷರನ್ನು ನೇಮಿಸಿದ್ದು, ದೇವದುರ್ಗ ಬ್ಲಾಕ್ಗೆ ಚಂದ್ರಕಾಂತ್ ಬಿಲ್ಲವ್, ಅರಕೇರಾ ಬ್ಲಾಕ್ಗೆ ಶಂಕರಪ್ಪ ಚೌಹಾಣ್, ಮಸ್ಕಿ ಬ್ಲಾಕ್ಗೆ ಹನುಮಂತಪ್ಪ ವೆಂಕಟಾಪುರ, ಮಸ್ಕಿ ಗ್ರಾಮೀಣ ಬ್ಲಾಕ್ಗೆ ರವಿಕುಮಾರ್ ಕನ್ನೂರು, ಮಾನವಿ ಬ್ಲಾಕ್ಗೆ ತಿಪ್ಪಣ್ಣ ಬಾಗಲವಾಡ್, ಮಾನವಿಯ ಸಿರವಾರ ಬ್ಲಾಕ್ಗೆ ಮಲ್ಲಪ್ಪ ನೇಮಕಗೊಂಡಿದ್ದಾರೆ.
ಹಾಗೆಯೇ ರಾಯಚೂರು ನಗರ ಬ್ಲಾಕ್ಗೆ ವಿಜಯಕುಮಾರ್, ಗ್ರಾಮೀಣ ಬ್ಲಾಕ್ಗೆ ಅನೋಕ್, ದೇವಸೂಗೂರು ಬ್ಲಾಕ್ಗೆ ಬಸವರಾಜ್, ಗಿಲ್ಲೆಸೂಗೂರು ಬ್ಲಾಕ್ಗೆ ರಮೇಶ್ ರೊಸ್ಲೆ ಅವರನ್ನು ನೇಮಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಲಿಂಗರಾಜ್ ಕೋಟೆ ತಿಳಿಸಿದ್ದಾರೆ.
--
ಗುತ್ತಿಗೆ ನೌಕರರ ಮುಷ್ಕರ
ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ. 30ರಂದು ಆರೋಗ್ಯ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಅನಿರ್ದಿಷ್ಠಾವಧಿ ಮುಷ್ಕರ ನಡೆಸಲಿದ್ದಾರೆ. ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಬಿ. ರಾಮು, ರಾಜ್ಯ ಖಜಾಂಚಿ ಶ್ಯಾಮಸುಂದರ್ ಪ್ರಕಟಣೆ ನೀಡಿ, ಗುತ್ತಿಗೆ ನೌಕರರಿಗೆ ಹೊಸ ವೇತನ ನೀತಿ ಜಾರಿಗೆ ತರಬೇಕು. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರ ಸೇವೆ ಕಾಯಂಗೊಳಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಈ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಮುಷ್ಕರದ ಸಂದರ್ಭದಲ್ಲಿ ಎಲ್ಲಾ ರೀತಿಯ ಕೆಲಸಗಳನ್ನು ಗುತ್ತಿಗೆ ನೌಕರರು ಸ್ಥಗಿತಗೊಳಿಸುತ್ತಿದ್ದು, ಅದರಿಂದ ರೋಗಿಗಳಿಗೆ ಆಗುವ ಅಡಚಣೆಗೆ ಸರ್ಕಾರ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.