ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಆಧಾರ್'ಗೆ ಹಣ ವಸೂಲಿ: ಗ್ರಾಮಸ್ಥರ ತಕರಾರು

Mainashree
Updated On : 30 Jan 2014, 11:28 am

ಮುದಗಲ್: ಸಮೀಪದ ಹೂನೂರು ಗ್ರಾಮದಲ್ಲಿ ಕೇಂದ್ರ ಸರಕಾರದ ನೂತನ ಯೋಜನೆ ಆಧಾರ್ ಕಾರ್ಡ್ ಕೇಂದ್ರದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆಚ್ಚುವರಿ ಹಣ ಕೊಡದೇ ಕೇಂದ್ರದಲ್ಲಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಕೇಂದ್ರವನ್ನು ಮುಚ್ಚಿಕೊಂಡು ಹೋದ ಘಟನೆ ಕಂಡು ಬಂದಿದೆ. ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಆಧಾರ ಕಾರ್ಡ್ ತಯಾರಿಸಿಕೊಡುವ ಕೇಂದ್ರವನ್ನು ಟೆಂಡರ್ ನೀಡಲಾಗಿದೆ. ಲಿಂಗಸ್ಗೂರು ತಹಶೀಲ್ದಾರ್ ಪರವಾನಗಿ ನೀಡಿದ್ದಾರೆ ಎಂದು ಲಿಂಗಸ್ಗೂರು ಮೂಲದ ಎನ್ಜಿಓ ಮೂಲಕ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. ಆಧಾರ್ ಮಾಡಿಕೊಡುವದಕ್ಕಾಗಿ ಪ್ರತಿ ವ್ಯಕ್ತಿ ರು. 25 ಶುಲ್ಕ ಭರಿಸಬೇಕೆಂದು ಹೇಳಿದರು. ಆದೇಶ ಪ್ರತಿ ನೀಡಿ ಎಂದು ಬಸನಗೌಡ ಮರಟಗೇರಿ ಎನ್ನುವವರು ಒತ್ತಾಯಿಸಿದರು. ಆದರೆ ಅಲ್ಲಿಯ ಸಿಬ್ಬಂದಿ ಆದೇಶ ಪ್ರತಿಯನ್ನು ತೋರಿಸದೇ ಕೇಂದ್ರವನ್ನು ಬಂದ್ಗೊಳಿಸಿ ತಮ್ಮ ಪರಿಕರಗಳನ್ನು ಯಂತ್ರಗಳನ್ನು ತೆಗೆದುಕೊಂಡು ಹೋದರು. ಫೆ.1ರಂದು ಗ್ರಾಮದಲ್ಲಿ ತಾಲೂಕು ಆಡಳಿತ ಮಂಡಳಿ ಜನಸಂಪರ್ಕ ಸಭೆ ಇರುವದರಿಂದ ಸಭೆಯ ಮಾರನೇ ದಿನದಿಂದ ಪ್ರಾರಂಭಿಸಲಾಗುವುದು ಎಂಬ ಮಾಹಿತಿಯಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement