ಲಿಂಗಸ್ಗೂರಿನಲ್ಲೂ ಮನವಿ
ಲಿಂಗಸ್ಗೂರು: ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಗುರುವಾರ ಉಪತಹಸೀಲ್ದಾರ್ ಖಾಜಾಹುಸೇನ್‌ರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾ ಸಮಿತಿಯಿಂದ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿ ನೀಡುವಂತೆ ಒತ್ತಾಯಿಸಿ 2013 ನ.28 ರಿಂದ 30ರವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ತೋರಿದೆ. ಕೂಡಲೇ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಪಕ್ಷದ ಮುಖಂಡರಾದ ಅಮರೇಶ ಕಲ್ಲೂರ, ಶಂಕ್ರಪ್ಪ ಕಬ್ಬೇರ, ಫೂಲಚಂದ ರಾಠೋಡ, ಆದಣ್ಣ ದೇವರಭೂಪೂರ, ಮನ್ಮಥ ಚಲವಾದಿ, ಶಾಮೀದ ಅಲಿ, ಹುಲಗಪ್ಪ ಕೆಸರಟ್ಟಿ, ನಿಂಗಪ್ಪ ಬುಂಕಲದೊಡ್ಡಿ, ಸೋಮಪ್ಪ ನಾಯಕ, ಸುಖಮುನೆಪ್ಪ ಚನ್ನಪಟ್ಟಣ ಸೇರಿದಂತೆ ಇದ್ದರು.