ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧನೂರಿನಲ್ಲಿ ಸತ್ಯಾಗ್ರಹ

Mainashree
Updated On : 30 Jan 2014, 11:39 am

ಸಿಂಧನೂರು: ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿಕೊಡಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ತಾಲೂಕ ಘಟಕದ ನೇತೃತ್ವದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಬಿಎಸ್‌ಪಿ ತಾಲೂಕಾಧ್ಯಕ್ಷ ಕೆ. ಹನುಮಂತಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿಕೊಡಲು ಒತ್ತಾಯಿಸಿ ಕಳೆದ ವರ್ಷ ನ.28, 29, 30ರಂದು ಧರಣಿ ನಡೆಸಲಾಗಿತ್ತು. ಆದರೆ ಸರ್ಕಾರ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ತೋರಿಸದಿದ್ದರಿಂದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇಂದು ಸಾಂಕೇತಿಕ ಧರಣಿ ಹಮ್ಮಿಕೊಂಡಿದೆ. ಪ್ರಮುಖವಾಗಿ ಸರ್ಕಾರ ವಿ. ಬಾಲಸುಬ್ರಣ್ಯನ್ ಸಮಿತಿ ವರದಿ ಒಪ್ಪಿಕೊಳ್ಳಬೇಕು. ಅದರನ್ವಯ ಅರ್ಜಿ ದಾರರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಬಿಎಸ್‌ಪಿ ಸಂಯೋಜಕರಾದ ಕೆ. ಮರಿಯಪ್ಪ, ಎಂ.ಕೆ.ಜಗ್ಗೇಶ, ಕಾರ್ಯದರ್ಶಿ ಭೀಮಪ್ಪ ಕವಿತಾಳ ಮಾತನಾಡಿದರು. ಧರಣಿಯಲ್ಲಿ ಬಿಎಸ್‌ಪಿ ಮುಖಂಡರು, ಕಾರ್ಯಕರ್ಚರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement