ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ: ಶಾಸಕ
ಮುದಗಲ್: ಮಳೆ ಆಶ್ರಿತವಾಗಿರುವ ರೈತರು ಕೃಷಿಯೊಂದಿಗೆ ಉಪ ಕಸುಬು ಹೈನುಗಾರಿಕೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಸಮೀಪದ ಮಿಟ್ಟಿಕೆಲ್ಲೂರಿನಲ್ಲಿ ಹಾಲು ಉತ್ಪಾದಕರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಗಮನ ಹರಿಸುವುದರಿಂದ ಬರಗಾಲದಲ್ಲಿಯೂ ಆರ್ಥಿಕ ಲಾಭ ಪಡೆಯಬಹುದು ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಹೈನುಗಾರಿಕೆ ರೈತರಿಗೆ ಸಾಕಷ್ಟು ಲಾಭ ತಂದುಕೊಡುತ್ತದೆ. ದೇಶದ ಆರ್ಥಿಕ ಸದೃಢತೆಗೆ ಸಹಕಾರವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆ ಮೂಲಕ ರೈತರಿಗೆ ಅನುಕೂಲ ನೀಡಿದೆ ಎಂದರು.
ವಿವಿ ಸಂಘದ ಆಡಳಿತಾಧಿಕಾರಿ ಬಸವಂತಾರಾಯ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಗೋಮಾತೆ(ಹಸು)ಗೆ ಪೂಜೆ ಮಾಡುವ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು. ಸಂಸದ ಬಿವಿ. ನಾಯಕ್, ಎಂಎಲ್ಸಿ ಎನ್.ಎಸ್. ಬೋಸರಾಜು, ರಾಬಕೋ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಅಮರಗುಂಡಪ್ಪ, ಸೂರ್ಯನಾರಾಯಣ, ಗುರು ಸಿದ್ದನಗೌಡ ಕೂಡ್ಲಿಗಿ, ಕೊಟ್ರೇಶ, ಸುರೇಶ, ಡಾ. ಸುನೀಲ್, ಜಿಪಂ ಸದಸ್ಯ ಶರಣಪ್ಪ, ರೈತ ಸಂಘದ ಮುಖಂಡ ಅಮರಣ್ಣ ಗುಡಿಹಾಳ, ಅಪ್ಪಾಜಿಗೌಡ ಇದ್ದರು.