ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಪೈಪ್ ತೆರವಿಗಾಗಿ ಬಂದ್ 14ಕ್ಕೆ

Mainashree
Updated On : 10 Jul 2014, 9:29 am

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 55ನೇ ಉಪಕಾಲುವೆ ಗೌಡನಭಾವಿವರೆಗೆ ರೈತರು ಅಳವಡಿಸಿರುವ ಅಕ್ರಮ ಪೈಪುಗಳ ತೆರವಿಗೆ ಆಗ್ರಹಿಸಿ ಜು.14 ರಂದು ಸಿಂಧನೂರು ಬಂದ್‌ಗೆ ನಿರ್ಧರಿಸಲಾಗಿದೆ.
ಪೈಪುಗಳ ತೆರವಿಗೆ ನಡೆಸಿದ ಹೋರಾಟಕ್ಕೆ ಮುನಿರಾಬಾದ್ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಗುಂಗೆ ಸ್ಪಂದಿಸಿಲ್ಲ. ಬದಲಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಮಧ್ಯೆ ಜಗಳ ಹಚ್ಚುವ ಕುತಂತ್ರ ನಡೆಸಿದ್ದಾರೆ ಎಂದು ಆರ್‌ವೈಎಫ್ ರಾಜ್ಯಾಧ್ಯಕ್ಷ ಎಂ. ಗಂಗಾಧರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ಸಂಘ, ಹಸಿರು ಸೇನೆ, ಆರ್‌ವೈಎಫ್ ನೇತೃತ್ವದಲ್ಲಿ ಅಕ್ರಮ ಪೈಪುಗಳ ತೆರವಿಗಾಗಿ ಅನಿರ್ದಿಷ್ಟ ಧರಣಿ, ಕಚೇರಿ ಮುತ್ತಿಗೆ, ರಸ್ತೆ ತಡೆ ಚಳವಳಿ ಹೀಗೆ ಅನೇಕ ಹೋರಾಟಗಳನ್ನು ಹಮ್ಮಿಕೊಂಡರೂ ಪ್ರಯೋಜನವಾಗಿಲ್ಲ. ಕೇವಲ 42 ಅನಧಿಕೃತ ಪೈಪುಗಳನ್ನು ಅಧಿಕಾರಿಗಳು ತೆರವು ಗೊಳಿಸಿದ್ದಾರೆ. ಇನ್ನೂ 11 ಅಕ್ರಮ ಪೈಪುಗಳನ್ನು ಬಿಟ್ಟಿದ್ದಾರೆ. ಅವೆಲ್ಲಾ ಪ್ರಭಾವಿ ರೈತರ ಹಾಗೂ ಜನ ಪ್ರತಿನಿಧಿಗಳ ಪೈಪ್‌ಗಳಾಗಿವೆ. ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ಜು.14 ರಂದು ಸಿಂಧನೂರು ಬಂದ್‌ಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮೂಕ ಪ್ರೇಕ್ಷಕರು: ನೀರಾವರಿ ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ಹಳ್ಳಕ್ಕೆ ಪೈಪ್‌ಲೈನ್ ಹಾಕಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪಡೆದುಕೊಳ್ಳುವವರ ವಿವರವನ್ನು ಕೆಲ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಕೆಳಭಾಗದ ಮತ್ತು ಮೇಲ್ಭಾಗದ ರೈತರು ಇದರಿಂದಾಗಿ ತಮ್ನ ತಮ್ಮ ಮಧ್ಯೆ ಹೊಡೆದಾಡಿಕೊಳ್ಳಲಿ,ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ರೈತರ ಮಧ್ಯದ ಜಗಳ ನೋಡುತ್ತಾ ಕುಳಿತುಕೊಳ್ಳಲು ತೀರ್ಮಾನಿಸಿದಂತೆ ಕಾಣುತ್ತದೆ ಎಂದು ಆರ್‌ವೈಎಫ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ ಟೀಕಿಸಿದರು. ರಮೇಶ ಪಾಟೀಲ್ ಬೇರ್ಗಿ, ಭೀಮಯ್ಯ ಜಾಲವಾಡ್ಗಿ, ರಂಗನಾಥ ಬುದ್ದಿನ್ನಿ, ಸೋಮನಾಥ ಬೆಳ್ಳಿಗನೂರು, ಅಡಿವೆಪ್ಪ ಜಾಲವಾಡ್ಗಿ, ಮಹಾಂತೇಶ ಸಾಗರಕ್ಯಾಂಪ್, ರಾಜರೆಡ್ಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement