ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಾಜಶಾಸ್ತ್ರೀಯ ಸಂಘದ ಸಮ್ಮೇಳನ 13ಕ್ಕೆ

Mainashree
Updated On : 11 Jul 2014, 10:05 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು.10
ಜಪಾನ್‌ನ ಯಕುಹೋಮಾ ನಗರದಲ್ಲಿ ಜು.13ರಿಂದ 19ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಮಾಜಶಾಸ್ತ್ರೀಯ ಸಂಘದ ಸಹಯೋಗದ 18ನೇ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತದಲ್ಲಿ ಮಹಿಳೆಯರ ಉನ್ನತ ಶಿಕ್ಷಣ ಹಾಗೂ ಹಿಂದುಳಿಯುವಿಕೆ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಲು ಅವಕಾಶ ದೊರೆತಿದೆ ಎಂದು ಜಿಲ್ಲಾ ಸಮಾಜಶಾಸ್ತ್ರೀಯ ಸಂಘದ ಅಧ್ಯಕ್ಷ ಬಸವರಾಜ ಕಳಸ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘವು ಕೇವಲ ಸಮಾಜಶಾಸ್ತ್ರದ ಉಪನ್ಯಾಸಕರನ್ನು ಒಳಗೊಂಡ ಸಂಘವಲ್ಲ. ಸಮಾಜದ ಸಂಕುಲದೊಂದಿಗೆ ಕನಿಷ್ಠ ಕಾಳಜಿ ತೋರಿಸುವ ಯಾವುದೇ ವ್ಯಕ್ತಿಗಳು ಸದಸ್ಯರಾಗುವ ಅರ್ಹತೆ ಹೊಂದಿದ್ದಾರೆಂದು ಅವರು ತಿಳಿಸಿದರು.
1951ರಲ್ಲಿ ಭಾರತದಲ್ಲಿ ಸಂಘ ಆಸ್ತಿತ್ವಕ್ಕೆ ಬಂದಿದ್ದು, ಇದುವರೆಗೆ ದೇಶದ ವಿವಿಧೆಡೆ ಸಂಘದ ವ್ಯಾಪ್ತಿ ವಿಸ್ತರಿಸಿದೆ. ಈಗಾಗಲೇ 17 ಮಹಾಸಮ್ಮೇಳನಗಳು ಪ್ರಪಂಚದ ನಾನಾ ಕಡೆಗಳಲ್ಲಿ ನಡೆದಿದೆ. ಜಪಾನಿನ ಯಕುಹೋಮ ನಗರದಲ್ಲಿ ಜು.13ರಿಂದ ಇಂಥ 18ನೇ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಿಂದ 20 ಜನ: ಹೈದ್ರಾಬಾದ್ ಕರ್ನಾಟಕದಿಂದ ಗುಲ್ಬರ್ಗ ವಿವಿಯ ಸಮಾಜಶಾಸ್ತ್ರೀಯ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಎಲ್. ಹಿರೇಮಠ ನೇತೃತ್ವದಲ್ಲಿ 11 ಜನ ಭಾಗವಹಿಸುತ್ತಿದ್ದು ಆ ತಂಡದಲ್ಲಿ ತಾವು ಒಬ್ಬರಾಗಿದ್ದಾಗಿ ತಿಳಿಸಿದ ಅವರು, ಜು.13ರ ಸಂಜೆ ಮಹಾಸಮ್ಮೇಳನವನ್ನು ಸಮಾಜಶಾಸ್ತ್ರೀಯ ಸಂಘದ ಅಂತಾರಾಷ್ಟ್ರೀಯ ಅಧ್ಯಕ್ಷ ನಿಖ್ಖಾಯ್ ಬರುವಾ ಉದ್ಘಾಟಿಸಲಿದ್ದಾರೆ. ರಾಜ್ಯದಿಂದ ಸುಮಾರು 18ರಿಂದ 20 ಜನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಮ್ಮೇಳನದ ನಿಮಿತ್ತ ತಾವು ಕಳಿಸಿದ್ದ ಮಹಿಳೆಯರ ಹಿಂದುಳಿಯುವಿಕೆ ಕುರಿತ ಪ್ರಬಂಧವು ಮಂಡನೆಗೆ ಆಯ್ಕೆಯಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣದಿಂದ ಮಹಿಳೆಯರು ದೂರವುಳಿದಿದ್ದಾರೆ. ಅದಕ್ಕೆ ಕಾರಣ, ಪರಿಹಾರ ಕುರಿತು ವಿಚಾರಗೋಷ್ಠಿಯಲ್ಲಿ ಪ್ರಸ್ತಾಪಿಸುತ್ತಿರುವುದಾಗಿ ತಿಳಿಸಿದರು.
ವಿಚಾರ ಮಂಡನೆ: ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳೆಯರ ಕಾಳಜಿ, ಸಮಸ್ಯೆಗಳ ಮೇಲೆ ಅಂಕಿ ಸಂಖ್ಯೆ ಹಾಗೂ  ಶಿಕ್ಷಣ ನೀತಿ, ಸೌಕರ್ಯಗಳು, ಸಮಾಜದ ಅಸಹಕಾರ ವಿಚಾರಗಳ ಕುರಿತು ವಿಚಾರ ಮಂಡಿಸಲಿರುವುದಾಗಿ ಹೇಳಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಪ್ರಧಾನ ಕಾರ್ಯದರ್ಶಿ ಅಮರೇಗೌಡ ಪಾಟೀಲ್, ಜಂಟಿ ಕಾರ್ಯದರ್ಶಿಗಳಾದ ಶರಣಬಸವ ಪಾಟೀಲ್, ಜೆ.ಎಲ್. ಈರಣ್ಣ, ಅಯ್ಯಪ್ಪ ತುಕ್ಕಾಯಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement