ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಪಹರಣ(?)ವಾಗಿದ್ದಾತ ತಪ್ಪಿಸಿಕೊಂಡು ವಾಪಸ್ಸಾದ

Mainashree
Updated On : 14 Jul 2014, 9:56 am

ಮುದಗಲ್: ಸಿನಿಮೀಯ ರೀತಿ ಜೂ.28ರಂದು ಅಪಹರಣ(?)ಕ್ಕೆ ಒಳಗಾಗಿದ್ದ ಯುವಕ ಕೊನೆಗೂ ತಪ್ಪಿಸಿಕೊಂಡು ಬಂದಿದ್ದಾನೆ.
ಸಮೀಪದ ಆಶಿಹಾಳದ ವಾಟರ್‌ಮನ್ ಮಂಜುನಾಥ(26) ಅಪಹರಣಕ್ಕೊಳಗಾಗಿ ತಪ್ಪಿಸಿಕೊಂಡು ಬಂದವನು. ಎರಡು ದಿನ ಗಳ ನಂತರ ಮನೆಗೆ ಮರಳಿ ಬಂದ ವನನ್ನು ಮಾತನಾಡಿಸಲು ಜನರು ಆಗಮಿಸುತ್ತಿದ್ದಾರೆ.
ನಡೆದಿದ್ದೇನು?: ಜೂ.28ರಂದು ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮೋಟಾರ್ ಆನ್ ಮಾಡಲು ಹೋಗಿದ್ದ ಯುವಕನನ್ನು ನಾಗರಹಾಳ ರಸ್ತೆಯಲ್ಲಿ ಓಮ್ನಿ ಕಾರಿನಲ್ಲಿ ಕುಳಿತಿದ್ದ ನಾಲ್ವರು ಕಾರು ತಳ್ಳುವಂತೆ ಹೇಳಿದ್ದಾರೆ. ತಳ್ಳಲು ಮುಂದಾದ ಈತನನ್ನು ವಾಹನದಲ್ಲಿ ಎಳೆದು ಹಾಕಿಕೊಂಡರು ಎಂದು ಅಪಹರಣಕ್ಕೆ ಒಳಗಾದ ಯುವಕ ವಿವರಿಸುತ್ತಾನೆ.
ಚೀರಲೂ ಅವಕಾಶ ಕೊಡದ ಅಪಹರಣಕಾರರು ಕೈಯಲ್ಲಿದ್ದ ಪಿಸ್ತೂಲ್ ತೋರಿಸಿ ಸುಮ್ಮನಿರುವಂತೆ ಹಿಂದಿ ಬಾಷೆಯಲ್ಲಿ ಹೇಳಿದರು. ಆಗ ಸುಮ್ಮನಾಗಿದ್ದಾನೆ. ಭಾನುವಾರ ಮುಂಜಾನೆ ಧರ್ಮಸ್ಥಳದ ಹೊರಭಾಗದ ಡಾಬಾ ಬಳಿ ಗಾಡಿ ನಿಲ್ಲಿಸಿದಾಗ ಕನ್ನಡ ಮಾತನಾಡುತ್ತಿದ್ದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡು ಕಾಡಿನೊಳಗೆ ಓಡಿ ಹೋದೆ. ಬೆಳಗಾದ ನಂತರ ಅಲ್ಲಿಯ ಮನೆಯವರ ಸಹಾಯದಿಂದ ಮಂಗಳೂರಿಗೆ ಹೋಗಿ ಅಲ್ಲಿದ್ದ ಸಂಬಂಧಿಕರ ಸಹಾಯದಿಂದ ಮನೆಗೆ ಬಂದಿರುವುದಾಗಿ ಮಂಜುನಾಥ ವಿವರಿಸುತ್ತಾನೆ. ಅಲ್ಲದೆ ಗಾಡಿಯಲ್ಲಿ ಸುಮಾರು 15- 20 ಹಿತ್ತಾಳೆಯ ತ್ರಿಶೂಲಗಳು ಮತ್ತು ಹಣದ ಚೀಲ ಹಾಗೂ ಎರಡು ಪಿಸ್ತೂಲುಗಳಿದ್ದವು. ಮತ್ತೆ ಬಿಳಿ ಸಮವಸ್ತ್ರ ಧರಿಸಿದ ಇನ್ನಿಬ್ಬರು ಮಕ್ಕಳಿದ್ದರು ಎಂದೂ ಯುವಕ ಹೇಳಿದ್ದಾನೆ.
ತಪ್ಪಿಸಿಕೊಂಡು ಬಂದಿರುವ ಯುವಕ ಜರ್ಝರಿತನಾಗಿದ್ದು ಈ ವಿಷಯ ಕೇಳಿದ ಜನತೆ ಮತ್ತು ಈತನ ಸಂಬಂಧಿಕರು ಆತಂಕಗೊಂಡಿದ್ದಾರೆ. ಆದರೆ ಈ ಅಪಹರಣ ಪ್ರಕರಣ ಪೊಲೀಸರ ಗಮನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ತಿಳಿಸಲು ಮುಂದಾಗದ ಯುವಕನ ಮನೆಯವರು ನಮ್ಮ ಮಗ ಉಳಿದು ಬಂದಿದ್ದಾನಲ್ಲ ಅಷ್ಟೇ ಸಾಕು ಎನ್ನುತ್ತಿದ್ದಾರೆ. ಈ ಪ್ರಕರಣ ನಾಗರಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

-

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement