ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆಗೆ ನುಗ್ಗಲು ಕರವೇ ಪ್ರಯತ್ನ, ಹಲವರು ವಶಕ್ಕೆ

Mainashree
Updated On : 15 Jul 2014, 10:03 am

ರಾಯಚೂರು: ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಸದಸ್ಯರು ಮಂಡಿಸಿದ ಅವಿಶ್ವಾಸ ವಿರೋಧಿಸಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬೊಬ್ಬೆ ಹಾಕಿ ನಗರಸಭೆಗೆ ನುಗ್ಗಲು ಯತ್ನಿಸಿದಾಗ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಗರಸಭೆ ಸಭಾಂಗಣದಲ್ಲಿ ಅವಿಶ್ವಾಸ ಸಭೆ ನಡೆಯುವುದಕ್ಕೂ ಮುನ್ನವೇ ಸೇರಿದ್ದ ನೂರಾರು ಸಂಖ್ಯೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಅವಿಶ್ವಾಸ ಹಾಗೂ ಅದಕ್ಕೆ ಕಾರಣರಾದ ಸದಸ್ಯರ ವಿರುದ್ಧ ಘೋಷಣೆ ಕೂಗಿದರು.
ಹೋರಾಟಕ್ಕೆ ತಡೆ: ನಗರಸಭೆ ಆಡಳಿತದ ವಿರುದ್ಧ ಬೊಬ್ಬೆ ಹಾಕಿ ಘೋಷಣೆ ಕೂಗಿದ ಕಾರ್ಯಕರ್ತರು, ನಗರಸಭೆಯ ಅಧ್ಯಕ್ಷೆ ಪರಿಶಿಷ್ಟ ಪಂಗಡದ ಮಹಿಳೆ ಎಂಬುದನ್ನು ಪರಿಗಣಿಸದೇ ಸದಸ್ಯರೆಲ್ಲರೂ ಒಗ್ಗೂಡಿ ಅವಿಶ್ವಾಸಕ್ಕೆ ಮುಂದಾಗಿದ್ದು ಅನ್ಯಾಯದ ಪರಮಾವಧಿಯಾಗಿದೆ ಎಂದು ಆರೋಪಿಸಿ, ನಗರಸಭೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ವಶಕ್ಕೆ ಪಡೆದರು.
ಆದರೆ ಇನ್ನುಳಿದ ಸಂಘಟನೆಗಳ ಕಾರ್ಯಕರ್ತರು ಹಾಗೂ ಮಹಾದೇವಿ ನಾಯಕ ಅವರ ಬೆಂಬಲಿಗರು ಅವಿಶ್ವಾಸ ಸಭೆ ಮುಗಿಯುವವರೆಗೆ ನಗರಸಭೆ ಎದುರು ಧರಣಿ ನಡೆಸಿದರು. ಸದಸ್ಯರು ಮಹಿಳಾ ಸದಸ್ಯೆಗೆ ಸಹಕಾರ ನೀಡದೇ ಅವಿಶ್ವಾಸ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ಆರೋಪಿಸಿದರು.
ಸೇರ್ಪಡೆ: ಅವಿಶ್ವಾಸ ಸಭೆಯಲ್ಲಿ ಸೋಲಾಗುತ್ತಿದ್ದಂತೆಯೇ ಸಭಾಂಗಣದಿಂದ ಹೊರಬಂದ ಪದಚ್ಯುತ ಅಧ್ಯಕ್ಷೆ ಮಹಾದೇವಿ ಅವರೂ ಹೋರಾಟಗಾರರ ಜತೆಗೂಡಿ ಪ್ರತಿಭಟನೆಗಿಳಿದರು. ಆದರೆ ಪೊಲೀಸರು ಅವರೂ ಸೇರಿದಂತೆ ಎಲ್ಲರನ್ನೂ ಅಲ್ಲಿಂದ ಮನವೊಲಿಸಿ ಕಳುಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement