ಗ್ರಾಮ ಲೆಕ್ಕಾಧಿಕಾರಿ ವರ್ಗಾವಣೆ ಹಿಂಪಡೆಗೆ ಡಿವೈಎಫ್ಐ ಮನವಿ
ಲಿಂಗಸ್ಗೂರು: ತಾಲೂಕಿನ ಗೌಡೂರು ಗ್ರಾಮ ಲೆಕ್ಕಾಧಿಕಾರಿ ಸಂಗಮೇಶ ಅವರ ವರ್ಗಾವಣೆ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಡಿವೈಎಫ್ಐ ಸಂಘಟನೆ ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಭಾನುಮತಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಗ್ರಾಮ ಲೆಕ್ಕಾಧಿಕಾರಿ ಸಂಗಮೇಶ ಅವರು ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಜನತೆ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಆದರೆ ತೊಂದರೆ ನೀಡುತ್ತಾರೆಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಏಕಾಏಕಿ ವರ್ಗಾವಣೆ ಆದೇಶ ಹೊರಡಿಸಿರುವುದು ವಿಷಾದನೀಯ. ಕೂಡಲೇ ಆದೇಶ ಹಿಂಪಡೆದು ಪುನಾ ಗೌಡೂರಿನಲ್ಲಿ ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಡಿವೈಎಫ್ಐ ತಾ. ಅಧ್ಯಕ್ಷ ಬಿ.ಎಸ್. ನಾಯಕ, ದುರುಗಪ್ಪ ಕಡ್ಡೋಣಿ, ರಾಜಾ ಸೇತುರಾಂ ನಾಯಕ, ನಾಗರಾಜ, ಯಮನೂರಪ್ಪ, ಅಮರೇಶ, ವೀರೇಶ, ಸುರೇಶ, ಕಂಠಪ್ಪ, ಗೋಪಾಲ ಇದ್ದರು.