'ಸಂತೃಪ್ತಿಗೆ ಗುರುಕರುಣೆ ಅಗತ್ಯ'
ಶಹಾಬಾದ್: ಮನುಷ್ಯನಿಗೆ ಜೀವನದಲ್ಲಿ ಸಂತೃಪ್ತಿ, ಸನ್ಮಾರ್ಗ, ಶಾಶ್ವತ ಸುಖ ಸಿಗಬೇಕಾಗದರೆ ಗುರುವಿನ ಕರುಣೆ, ಮಾರ್ಗದರ್ಶನ ಅಗತ್ಯ ಎಂದು ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಸಿದ್ದತೋಚೇಂದ್ರ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ಗುರುಪೂರ್ಣಿ ನಿಮಿತ್ತ ಗ್ರಾಮದ ಮಹೇಶ್ವರಿ ಸಮಾಜದ ವತಿಯಿಂದ ಕೈಲಾಸ ಮಂಟಪದಲ್ಲಿ ಆಯೋಜಿಸಿದ್ದ ಗುರುಗಳ ಪಾದಪೂಜೆ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಕಿರೀಟ ಸ್ವೀಕರಿಸಿ ಆಶೀರ್ವಚನ ನೀಡುತ್ತ ಮಾತನಾಡಿದರು. ಶ್ರೀಗಳು ಉತ್ತರ ಭಾರತ ಪ್ರವಾಸ ಕೈಗೊಂಡ ಮಠದ ಭಕ್ತರಾದ ಮಲ್ಲಣ್ಣಗೌಡ ಪೋಲಿಸ್ಪಾಟೀಲ ದಂಪತಿಗಳಿಗೆ ಆಶೀರ್ವದಿಸಿದರು.