ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆದರ್ಶ ವ್ಯಕ್ತಿಯಾಗಲು ಶಿಸ್ತು, ಸಮಯ ಪಾಲನೆ ಅವಶ್ಯ

Rashmi Kasaragodu
Updated On : 18 Jul 2014, 12:10 pm

ಸಿಂಧನೂರು: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯಪಾಲನೆಯಿಂದ ಉತ್ತಮವಾಗಿ ಅಭ್ಯಾಸ ಮಾಡಿ ಆದರ್ಶ ವ್ಯಕ್ತಿಗಳಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಅಂಬಾಮಠ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಿ.ರವಿಯಪ್ಪ ಹೇಳಿದರು.
ತಾಲೂಕಿನ ಅಂಬಾಮಠ ಸರ್ಕಾರಿ ಪ್ರೌಢಶಾಲೆಯ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾ ಸಂಸತ್ತಿಗೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆ ನಡೆಸಿದ್ದು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹಿರಿಯ ಶಿಕ್ಷಕ ಬೀರಪ್ಪ ಶಂಭೋಜಿ ಶಾಲಾ ಸಂಸತ್ತಿಗೆ ಆಯ್ಕೆಯಾದ ನೂತನ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ ವಿದ್ಯಾರ್ಥಿಗಳು ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಸರಿಯಾಗಿ ಪಾಲಿಸಿ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕರಾದ ಸಂಗಮೇಶ ಕೋಟೆ, ಮತ್ತಿಹಳ್ಳಿ ನಾಗರಾಜ್, ಗಂಗಾಧರಯ್ಯ ಹಿರೇಮಠ, ನಾಗರಾಜ ಶೆಟ್ಟಿ, ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್, ಪರಿಮಳ, ಮಮ್ತಾಜ ಬೇಗಂ, ಶೀಲಾ ಉಪಸ್ಥಿತರಿದ್ದರು.
ಶಾಲಾ ಸಂಸತ್ತಿಗೆ ಆಯ್ಕೆಯಾದವರು: ಪ್ರಧಾನ ಮಂತ್ರಿಯಾಗಿ ಪ್ರಜ್ವಲ್, ಹಣಕಾಸು ಮಂತ್ರಿ ಪಂಪಾಪತಿ, ಕಾನೂನು ಮಂತ್ರಿ ಶೇಖ್ ಹುಸೇನ್, ಆರೋಗ್ಯ ಮಂತ್ರಿ ಹುಸೇನ್ ಬಾಷಾ, ಕ್ರೀಡಾ ಮಂತ್ರಿ ರವಿಕುಮಾರ, ಮಹಿಳಾ ಮಂತ್ರಿ ನವರತ್ನ, ಪ್ರವಾಸ ಮಂತ್ರಿ ಕರಿಬಸವ, ವಾರ್ತಾ ಮಂತ್ರಿ ಸುದರ್ಶನ, ಸಾಂಸ್ಕೃತಿಕ ಮಂತ್ರಿ ಪಂಪಾಪತಿ ವಿ., ಸಹಕಾರ ಮಂತ್ರಿ ಆನಂದ, ಪ್ರಾರ್ಥನಾ ಮಂತ್ರಿ ಅಯ್ಯಪ್ಪ ಹಾಗೂ ಸ್ವಚ್ಛತಾ ಮಂತ್ರಿಯಾಗಿ ಆಂಜನೇಯ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement