ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಹಸೀಲ್ದಾರ್ ದುರ್ವರ್ತನೆ ಸಿಡಿದೆದ್ದ ಸಿಬ್ಬಂದಿ, ಪ್ರತಿಭಟನೆ

Rashmi Kasaragodu
Updated On : 18 Jul 2014, 12:11 pm

.ಪ್ರ. ವಾರ್ತೆ    ರಾಯಚೂರು    ಜು. 17
ನಗರದ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ತಹಸೀಲ್ದಾರರ ದುರ್ವರ್ತನೆ ಖಂಡಿಸಿ ಗುರುವಾರ ದಿಢೀರ್ ಪ್ರತಿಭಟನೆಗೆ ಇಳಿದಿದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಯಿತು.
ತಹಸೀಲ್ದಾರ್ ಬಾಲರಾಜ್ ದೇವರಕದ್ರ ಅವರು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಸಿಬ್ಬಂದಿ ಬೆಳಗ್ಗೆ ದಿಢೀರ್ ಹೋರಾಟಕ್ಕೆ ಮುಂದಾಗಿದ್ದರಿಂದ ಕಚೇರಿ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡವು. ತಹಸೀಲ್ದಾರರ ವರ್ತನೆ ಖಂಡಿಸಿ
ಸಿಬ್ಬಂದಿ ಘೋಷಣೆ ಕೂಗಿದರು. ಕಳೆದ ಮೂರು ತಿಂಗಳಿಂದ ತಹಸೀಲ್ದಾರರು ಕಚೇರಿ ಸಿಬ್ಬಂದಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಕೆಟ್ಟ ಪದಗಳನ್ನು ಪ್ರಯೋಗಿಸಿ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ ಸಿಬ್ಬಂದಿ ಚುನಾವಣೆಯ ಸಂದರ್ಭದಲ್ಲಿಯೇ ಅವರು ದುರ್ವರ್ತನೆ ಪ್ರದರ್ಶಿಸಿದ್ದರು.
ಹೋರಾಟ ಅನಿವಾರ್ಯವಾಯ್ತು: ಆದರೆ ಚುನಾವಣೆ ಒತ್ತಡದ ಹಿನ್ನೆಲೆಯಲ್ಲಿ ಅವರು ವರ್ತಿಸುತ್ತಿರಬಹುದೆಂದು ಮೌನವಾಗಿ ಸಹಿಸಿಕೊಂಡಿದ್ದು ಅವರು ಆನಂತರವೂ ಕಿರುಕುಳ ಮುಂದುವರಿಸಿದ್ದರಿಂದ ಹೋರಾಟಕ್ಕಿಳಿದಿದ್ದಾಗಿ ಪ್ರತಿಭಟನಾನಿರತರು ದೂರಿದರು.
ಕಚೇರಿಯ ಪುರುಷ, ಮಹಿಳಾ ಸಿಬ್ಬಂದಿ ಎನ್ನದೇ ಎಲ್ಲರ ಮೇಲೂ ವಿನಾಕಾರಣ ತಹಸೀಲ್ದಾರರು ಹರಿಹಾಯುತ್ತಾರೆ. ಮಹಿಳಾ ಸಿಬ್ಬಂದಿಯ ದೂರವಾಣಿಗೆ ಕರೆ ಮಾಡಿ ಕ್ರಮದ ಬೆದರಿಕೆಯೊಡ್ಡುತ್ತಾರೆ. ತಹಸೀಲ್ದಾರರ ವರ್ತನೆಯಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿದರು.
ಕಾರಣ ಕೂಡಲೇ ತಹಸೀಲ್ದಾರರನ್ನು ಬೇರೆಡೆಗೆ ವರ್ಗಾಯಿಸಬೇಕು. ನೌಕರರಿಗೆ ವಿನಾಕಾರಣ ತೊಂದರೆ ನೀಡಿದ ತಹಸೀಲ್ದಾರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಎಂ.ಪಿ. ಮಾರುತಿ ಅವರನ್ನು ಆಗ್ರಹಿಸಿದರು.


ಮುಷ್ಕರ ಬಿಸಿ, ಕಚೇರಿ ಬಿಕೋ
ತಹಸೀಲ್ದಾರ್ ಕಚೇರಿ ಸಿಬ್ಬಂದಿ ದಿಢೀರ್ ಮುಷ್ಕರಕ್ಕೆ ಮುಂದಾಗಿದ್ದರಿಂದ ಕಚೇರಿಯಲ್ಲಿ ಕುರ್ಚಿಗಳು ಖಾಲಿಯಾಗಿದ್ದದ್ದು ಕಂಡು ಬಂದಿತು. ಅಷ್ಟೇ ಅಲ್ಲ, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಯಿತು. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಸಿಬ್ಬಂದಿಯ ಹೋರಾಟಕ್ಕೆ ಮೂಕ ಪ್ರೇಕ್ಷಕರಾಗಿ ಗ್ರಾಮಗಳಿಗೆ ಮರಳುವಂತಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement