ಬಸ್ ಸಂಚಾರ ಆರಂಭಕ್ಕೆ ಆಗ್ರಹ
ರಾಯಚೂರು: ದೇವದುರ್ಗ- ಶಾವಂತಗೇರಾ ಮತ್ತು ರಾಯಚೂರು- ಶಾವಂತಗೇರಾ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಈಚೆಗೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಂಘಟನೆಯು ರಾಯಚೂರು ನಿಂದ ಶಾವಂತಗೇರಾ ಹಾಗೂ ದೇವದುರ್ಗ- ಶಾವಂತಗೇರಾ ಮಾರ್ಗದಲ್ಲಿ ಸುಂಕೇಶ್ವರಹಾಳ ಗ್ರಾಮದ ಮೂಲಕ ಬಸ್ ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿದರು. ಸದ್ಯ ಸುಂಕೇಶ್ವರಹಾಳ ಮಾರ್ಗದಲ್ಲಿ ಬಸ್ ಸಂಚಾರವಿಲ್ಲ. ಹಾಗಾಗಿ ಹದ್ದಿನಾಳ, ಬೂದಿನಹಾಳ, ಹಂಚಿನಾಳ ಮತ್ತು ಶಾವಂತಗೇರಾ ಮಾರ್ಗವಾಗಿ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಕಾರಣ ಕೂಡಲೇ ಈ ನಿಟ್ಟಿನಲ್ಲಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಸಂಘಟನೆಯ ಅಧ್ಯಕ್ಷ ಬಿ.ಗಂಗಾಧರಸ್ವಾಮಿ, ಅಶೋಕ ಶೆಟ್ಟಿ, ಚಂದ್ರು, ಅಶ್ವಿನಿಕಾಂತ್, ದೇವಪ್ಪ ನಾಯಕ ಹಂಚಿನಾಳ, ಸಿ.ಆರ್.ನಾಯಕ ಸೇರಿದಂತೆ ಅನೇಕರಿದ್ದರು.