ಅಕ್ರಮ ಭೂ ಕಬಳಿಕೆ ತಡೆಗೆ ಜೈಕರವೇ ಒತ್ತಾಯ
ರಾಯಚೂರು: ನಗರದಲ್ಲಿ ಕಾನೂನು ಬಾಹಿರವಾಗಿ ಸರ್ಕಾರಿ ಜಾಗೆ ಕಬಳಿಸಿ ಅಕ್ರಮ ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜೈ ಕರ್ನಾಟಕ ರಕ್ಷಣಾ ವೇದಿರೆ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ಸಿಯಾತಲಾಬ್ ಪ್ರದೇಶದ ಸರ್ವೆ ನಂಬರ್ 33/1ರಲ್ಲಿ 39.22 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗೆ ಕಬಳಿಸಿ ನಿವೇಶನ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ರಾಜಕೀಯ ವ್ಯಕ್ತಿಗಳ ಬೆಂಬಲ, ಅಧಿಕಾರಿಗಳ ನೆರವಿನಿಂದ ಸರ್ಕಾರಿ ಜಾಗೆ ಕಬಳಿಸಿರುವ ಸತ್ಯವತಿ ಮುತ್ಯಾಲರಾವ್ ಎಂಬುವವರು ನಿವೇಶನ ತಯಾರಿಸಿದ್ದಾರೆ. ರಾಜಾ ಕಾಲುವೆಯನ್ನು ಕಬಳಿಸಿದ್ದು ಅದನ್ನು ಬಂದ್ ಮಾಡುವ ಪ್ರಯತ್ನದಲ್ಲಿದ್ದು ಅದರಿಂದ ನಗರದ ಕೊಳಚೆ ನೀರು ಹರಿಯಲು ಅಡಚಣೆಯಾಗಲಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ವಾರದೊಳಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸಂಬಂಧಿಸಿದ ಅಧಿಕಾರಿ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಅಕ್ರಮಕ್ಕೆ ತಡೆಹಾಕಬೇಕೆಂದು ಜಿಲ್ಲಾಧ್ಯಕ್ಷ ಗಂಗಾಧರಸ್ವಾಮಿ, ಸಂತೋಷ್ ವಂದಾಲಿ ಇದ್ದರು.