ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಲ್ಬಿಕೆ ಕಾಲೇಜಿನಲ್ಲಿ ಆಯುರ್ವೇದ ದಿನಾಚರಣೆ

Rashmi Kasaragodu
Updated On : 20 Jul 2014, 1:47 am

ಸಿಂಧನೂರು: ಯಾವುದೇ ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಪ್ರಾಕೃತಿಕ ಕೊಡುಗೆ ಎಂದು ಯುವಭಾರತ ರಾಜ್ಯ ಪ್ರಭಾರಿ ಎಂ. ಭಾಸ್ಕರ್ ಹೇಳಿದರು. ನಗರದ ಎಲ್.ಬಿ.ಕೆ. ಕಾಲೇಜಿನಲ್ಲಿ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ನಡೆದ 'ನಿತ್ಯ ಜೀವನದಲ್ಲಿ ಆಯುರ್ವೇದ' ಕುರಿತು ಉಪನ್ಯಾಸ ನೀಡಿದರು. ರೋಗಗಳ ಸಮಸ್ಯೆಗೆ ಪರಿಹಾರ ಆಯುರ್ವೇದದಲ್ಲಿದೆ. ರೋಗದ ಲಕ್ಷಣಗಳಿಗಲ್ಲದೆ ರೋಗದ ಮೂಲಕ್ಕೆ ಚಿಕಿತ್ಸೆ ಆಯುರ್ವೇದದಿಂದ ಸಾಧ್ಯ. ಗಿಡಮೂಲಿಕೆಗಳಿಂದ ತಯಾರಿಸಲಾದ ಸಾವಿರಾರು ವರ್ಷಗಳ ಪರಂಪರೆಯಾದ ಆಯುರ್ವೇದವನ್ನು ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಬಸವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ಪಿ. ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಶರಣರ ವಚನದಂತೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲಿ ಎಂದರು. ಶರಣಪ್ಪ ಹಸ್ಬಿ ಮಾತನಾಡಿ, ಆಹಾರವನ್ನು ಹಿತ, ಮಿತ ಪದ್ಧತಿಯಲ್ಲಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು. ಎಚ್.ಜಿ. ಹಂಪಣ್ಣ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement