ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಗೆ ಆಯ್ಕೆ
ರಾಯಚೂರು: ತಾಲೂಕಿನ ಅಸ್ಕಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಮಿತಿ ತಿಳಿಸಿದೆ. ಸಮಿತಿಗೆ ಕಾನೂನು ಸಲಹೆಗಾರರಾಗಿ ರಾಘವೇಂದ್ರ ನಾಯಕ ಹಾಗೂ ಎಸ್. ರಾಮುನಾಯಕ ವಕೀಲರು ನೇಮಕಗೊಂಡಿದ್ದಾರೆ. ಅದೇ ರೀತಿ ಅಧ್ಯಕ್ಷರಾಗಿ ಪಿ. ಸೂರ್ಯನಾರಾಯಣ, ಉಪಾಧ್ಯಕ್ಷರಾಗಿ ತಿಮ್ಮಪ್ಪ ನಾಯಕ, ರಘುವೀರ ನಾಯಕ, ಮಾರೆಪ್ಪ ಮೇಸ್ತ್ರಿ, ಇಡಪನೂರು ನರಸಿಂಹಲು, ವೀರೇಶ ನಾಯಕ, ಪ್ರಧಾನ ಕಾರ್ಯದರ್ಶಿಗಳಾಗಿ ಅಂಜನೇಯ್ಯ ಕೆರೆಬೂದೂರು, ಮಲ್ಲಿಕಾರ್ಜುನ ನಾಯಕ, ಸಂಘಟನಾ ಕಾರ್ಯದರ್ಶಿಗಳಾಗಿ ಸಿದ್ದಲಿಂಗ ನಾಯಕ, ಈಶಪ್ಪ ನಾಯಕ, ಖಜಾಂಚಿಯಾಗಿ ರಾಮು ನಾಯಕ ನೇಮಕಗೊಂಡಿದ್ದಾರೆ. ಸಮಿತಿಗೆ ಅನೇಕರು ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ಸಮಿತಿ ತಿಳಿಸಿದೆ.