ವಿವಿಧ ಕಾಮಗಾರಿಗೆ ಶಾಸಕರಿಂದ ಚಾಲನೆ
ಮಸ್ಕಿ: ಪಟ್ಟಣದಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಶಾಸಕ ಪ್ರತಾಪಗೌಡ ಪಾಟೀಲ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಇಲ್ಲಿನ ಸೂರ್ಯನಗರದ ಬಳಿ ರೈತ ಸಂಪರ್ಕ ಕೇಂದ್ರದ 38 ಲಕ್ಷ ವೆಚ್ಚದ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಬಾಲಕಿಯರ ಸರ್ಕಾರಿ ಉರ್ದು ಪ್ರೌಢಶಾಲೆ ವಿಭಾಗವನ್ನು ಉದ್ಘಾಟಿಸಿದರು. ನಂತರ ಎಲಿಗಾರ ಓಣಿಯ ಹತ್ತಿರದ ಹಳೆ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ನೂತನ ವಸತಿ ಗೃಹದ ಹನ್ನೆರಡು ನಿವೇಶನಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಮಹಾದೇವಪ್ಪಗೌಡ, ಎಚ್.ಬಿ. ಮುರಾರಿ, ತಾಪಂ ಸದಸ್ಯರಾದ ಹನುಮಂತಪ್ಪ ಮೋಚಿ, ನೀಲಮ್ಮ ಮರಳದ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಘಟಕ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ.ಎಚ್. ದಿವಟರ್, ಅಪ್ಪಾಜಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ್, ಗ್ರಾಪಂ ಅಧ್ಯಕ್ಷ ವೀರೇಶ ಹೂವಿನಬಾವಿ ಸೇರಿ ಅನೇಕರಿದ್ದರು.