ಶಾಲಾ ನೈರ್ಮಲ್ಯ ಶೈಕ್ಷಣಿಕ ಪ್ರವಾಸ ಯಶಸ್ವಿ
ರಾಯಚೂರು: ತಾಲೂಕಿನ ಯರಗೇರಾ, ತುಂಟಾಪುರ ಮತ್ತು ಬಿಜನಗೇರಾ ಕ್ಲಸ್ಟರ್ನ ಸರ್ಕಾರಿ ಶಾಲೆಗಳ ಶಿಕ್ಷಕರು, ಶಾಲಾ ಮಂತ್ರಿ ಮಂಡಲದ ಸದಸ್ಯರು ಮತ್ತು ಎಸ್ಡಿಎಂಸಿ ಸದಸ್ಯರಿಗೆ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯಿಂದ ಪ್ರವಾಸ ಆಯೋಜಿಸಲಾಗಿತ್ತು. ಮೈಸೂರು ತಾಲೂಕಿನ ಹೆಗ್ಗಡದೇವನಕೋಟೆ ತಾಲೂಕಿನ ಮಾಗುಡಿಲು, ನಂಜನಾಯಕನಹಳ್ಳಿ, ಭೀಮನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಪ್ರವಾಸ ಕರೆದೊಯ್ಯಲಾಗಿತ್ತು. ಮೂರು ದಿನಗಳ ಶೈಕ್ಷಣಿಕ ಪ್ರವಾಸದಲ್ಲಿ ಶಾಲಾ ನೈರ್ಮಲ್ಯ ಹಾಗೂ ಶೈಕ್ಷಣಿಕ ಅಧ್ಯಯನ ಕುರಿತು ಮಾಹಿತಿ ನೀಡಲಾಯಿತು. ಪ್ರವಾಸಕ್ಕೆ ಶಿಕ್ಷಣಾಧಿಕಾರಿ ಬೋರೆಡ್ಡಿ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅಫ್ರೋಜ್ ಪಾಷಾ, ಯೋಜನಾ ಸಂಯೋಜಕ ಪಿ.ಡಿ.ನಾಯಕ್, ಯರಗೇರಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಹೀರಾಲಾಲ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.