ತಾ. ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಿ
ಸಿಂಧನೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆ.12ರಂದು ಸಿಂಧನೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.
ಅಂದು ಬೆಳಗ್ಗೆ 11ಕ್ಕೆ ಎಡಿಬಿ ಯೋಜನೆಯ 50 ಕೋಟಿ ವೆಚ್ಚದ ಕುಡಿವ ನೀರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಿದ್ಧತೆ ಕೈಗೊಳ್ಳಬೇಕು. ರೈತರ ಕುಂದು-ಕೊರತೆ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಪರಿಹರಿಸಬೇಕು. ಮುಖ್ಯಮಂತ್ರಿಗಳ ಬಳಿ ಯಾವುದೇ ಸಮಸ್ಯೆ ಬಗ್ಗೆ ದೂರು ಬಾರದಂತೆ ನೋಡಿಕೊಂಡು ಅಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಬೇಕೆಂದು ಬಾದರ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ಗಂಗಪ್ಪ, ಡಿವೈಎಸ್‌ಪಿ ಎಂ.ವಿ. ಸೂರ್ಯವಂಶಿ, ಸಿಪಿಐ ರಮೇಶ ರೊಟ್ಟಿ, ಪಿಡಬ್ಲ್ಯೂಡಿ ಇಲಾಖೆ ಎಇಇ ನಾಗರಾಜ ಗೊಂಚಿ, ನಗರಸಭೆ ಅಧ್ಯಕ್ಷ ಸೈಯ್ಯದ್ ಜಾಫರ್ ಜಾಗೀರದಾರ್, ತಾಪಂ ಇಒ ಜಿ.ಬಿ. ಹೂಗಾರ, ಸಾರಿಗೆ ವ್ಯವಸ್ಥಾಪಕ ಕರೇಗೌಡ ಮುಕ್ಕುಂದಿ, ನಗರಸಭೆ ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದ ಇದ್ದರು.