ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸ್ ಸೌಕರ್ಯ ಒದಗಿಸುವಂತೆ ಡಿಪೋಗೆ ಮುತ್ತಿಗೆ

Mainashree
Updated On : 21 Jul 2014, 10:08 am

ಸುರಪುರ: ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸೌಲಭ್ಯ ಒದಗಿಸುವಂತೆ  ಒತ್ತಾಯಿಸಿ ಎಸ್ಸೆಫೈ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಬಸ್ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ತಾ. ಸೀತಾರಾಮ ರಾಠೋಡ ಮಾತನಾಡಿ, ಈಗಿರುವ ಸಾರಿಗೆ ಸೌಲಭ್ಯದಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುರಪುರ-ಹೆಮನೂರು, ಸುರಪುರ ಬೈಚಬಾಳ್ ಬಸ್‌ಗಳನ್ನು ತಕ್ಷಣ ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಸಾರಿಗೆ ಅಧಿಕಾರಿಗಳು ಬೇಡಿಕೆ ಈಡೇರಿಸುವಂತೆ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು. ಸಾರಿಗೆ ಇಲಾಖೆಯ ಕೃಷ್ಣ ದೇವಪುರ, ಸತ್ಯನಾರಾಯಣ, ಎಸ್ಸೆಫೈ ಜಿಲ್ಲಾಧ್ಯಕ್ಷ ಪ್ರಕಾಶ ಆಲ್ಹಾಲ, ಸುರಪುರ ತಾಲೂಕು ಉಪಾಧ್ಯಕ್ಷ ಮಲ್ಲು ಹದನೂರು, ಮುಖಂಡರಾದ ಹಣಮಂತ ರಡ್ಡಿ, ಮಲ್ಲು ಕನ್ನೆಳ್ಳಿ, ದೇವರಾಜ್ ನಾಯಕ, ಹನುಮಗೌಡ ಮಕಾಶಿ, ಚಂದ್ರಶೇಖರ ಮಕಾಶಿ, ಮೌನೇಶ್, ಬಸವರಾಜ ಹಣಮಂತ್ರಾಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement