ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ರುದ್ರಗೌಡ
ಮುದಗಲ್: ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ದೇಶದ ಉತ್ತಮ ನಾಗರಿಕರಾಗಿ ಬೆಳೆಯಬೇಕೆಂದು ತಾಲೂಕು ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಪಾಟೀಲ್ ತುರಡಗಿ ಹೇಳಿದರು. ಸಮೀಪದ ಛತ್ತರ ಗ್ರಾಮದಲ್ಲಿ ನಾಗಲಾಪುರ, ಕನ್ನಾಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲವು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ. ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ಸ್ನೇಹ, ಸಹೋದರತ್ವ ಬೆಳೆದು ಜಾತಿ ಮತ ಭೇದಗಳನ್ನು ಹೋಗಲಾಡಿಸಿದರೆ ಶಾಂತಿ ಸುವ್ಯವಸ್ಥೆಗೆ ಕಾರಣವಾಗುತ್ತದೆ ಎಂದರು. ಶಿಕ್ಷಣ ಸಂಯೋಜಕ ಮಹಾಮುನಿಯಪ್ಪ, ಯುವ ಮುಖಂಡ ಸಿದ್ದು ಬಂಡಿ ಮಾತನಾಡಿದರು.