ಲೈಂಗಿಕ ದೌರ್ಜನ್ಯ ತಡೆಗೆ ನೈತಿಕ ಶಿಕ್ಷಣ ಅವಶ್ಯ
ಸಿಂಧನೂರು: ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸಂಪೂರ್ಣ ತೊಡೆದು ಹಾಕಲು ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಯೋಜನ ಪ್ರಾಧಿಕಾರ ಅಧ್ಯಕ್ಷ ಎಸ್. ಶರಣೇಗೌಡ ಹೇಳಿದರು.
ನಗರದ ಪಿಡಬ್ಲ್ಯುಡಿ ಕ್ಯಾಂಪ್ನ ದುದ್ದುಪುಡಿ ಶಾಲೆಯಲ್ಲಿ ಏರ್ಪಡಿಸಿದ್ದ ಪಿಯುಸಿ, ಬಿಕಾಂ ಮತ್ತು ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಎನ್ಎಸ್ಎಸ್ ಕಾರ್ಯಚಟುವಟಿಕೆ ಸಮಾರಂಭದಲ್ಲಿ ಮಾತನಾಡಿದರು.
ಗುಲ್ಬರ್ಗದ ಎನ್ಎಸ್ಎಸ್ ಸಂಯೋಜನಾಧಿಕಾರಿ ಎಸ್. ಶಿವರಾಜ, ದುದ್ದುಪುಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ರಾಮಕೃಷ್ಣ ಮೂರ್ತಿ, ಕಾರ್ಯದರ್ಶಿ ಆರ್.ಸಿ. ಪಾಟೀಲ್ ಮಾತನಾಡಿದರು. ಪ್ರಾಚಾರ್ಯರಾದ ಆನಂದ ಕೆ. ಪುರೋಹಿತ್, ಸೂಗುರಯ್ಯ ಸಾಲಿಮಠ, ವಿಜಯಶಿಲ್ಪ ಇದ್ದರು. 2013-2014ನೇ ಸಾಲಿನಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರೇರಣಾ ಅವರನ್ನು ಸನ್ಮಾನಿಸಲಾಯಿತು. ರೇವತಿ ಠಸಂಗಡಿಗರು ಪ್ರಾರ್ಥಿಸಿದರು. ರೇಖಾ ಗೊರೇಬಾಳ ಸ್ವಾಗತಿಸಿದರು. ಬಿಕಾಂ ವಿದ್ಯಾರ್ಥಿನಿಯರು ಎನ್ಎಸ್ಎಸ್ ಗೀತೆ ಹಾಡಿದರು.