ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಇಂದು
ಸಿಂಧನೂರು: ತಾಲೂಕಿನ ಅಂಬಾಮಠದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಜು.25ರಂದು ಸಂಜೆ 5.30ಕ್ಕೆ ತಾ. ಕಸಾಪ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಹಮ್ಮಿಕೊಳ್ಳಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ನೆನಪು ಹಾಗೂ ಸ್ವರಚಿತ ಕವನ ವಾಚನ ನಡೆಯಲಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಕೌದಿ ಹಾಗೂ ವೀರೇಶ ಗೋನವಾರ ತಿಳಿಸಿದ್ದಾರೆ. ಮಾನವಿ ತಾಲೂಕಿನ ಇರಕಲ್ ಮಠದ ಶಿವಶಕ್ತಿ ಪೀಠದ ಜಗದ್ಗುರು ಬಸವ ಪ್ರಸಾದ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಅಂಬಾಮಠದ ಅಂಬಾದೇವಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಈರಪ್ಪ ಎಸ್.ಎ. ಉದ್ಘಾಟಿಸುವರು.