ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಸ್ಸೆಸ್ಸೆಲ್ಸಿ: ನೂತನ ಪಠ್ಯಕ್ರಮ ಕುರಿತು ಕಾರ್ಯಾಗಾರ

Rashmi Kasaragodu
Updated On : 27 Jul 2014, 12:17 pm

ರಾಯಚೂರು: ನಗರದ ಹಾಷ್ಮಿಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ನೂತನ ಪಠ್ಯಕ್ರಮದ ಕುರಿತು ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನವಜೀವನ ಮಹಿಳಾ ಒಕ್ಕೂಟ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತಿತರೆ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಾಗಾರವನ್ನು ಡಿಡಿಪಿಐ ರಾಮಾಂಜನೇಯ ಉದ್ಘಾಟಿಸಿ, ಗಣಿತ ಮತ್ತು ವಿಜ್ಞಾನ ವಿಷಯಗಳು ನಿತ್ಯ ಜೀವನ ಹಾಗೂ ಪರೀಕ್ಷೆಯ ದೃಷ್ಟಿಯಿಂದಲ್ಲೂ ಪ್ರಮುಖವಾಗಿವೆ. ಶಿಕ್ಷಕರು ಮಕ್ಕಳ ಮನಸ್ಥಿತಿಯನ್ನು ಅರಿತು ಬೋಧಿಸುವ ಕೌಶಲ್ಯ ರೂಢಿಸಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ನೂತನ ಪಠ್ಯಕ್ರಮದ ಬಗ್ಗೆಯಿರುವ ಆತಂಕ ದೂರ ಮಾಡುವತ್ತ ಶಿಕ್ಷಕರು ಗಮನಹರಿಸಬೇಕು. ಆ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಪೂರಕವಾಗಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು. ಗಣಿತ ವಿಷಯ ಪರಿವೀಕ್ಷಕ ಅರುಣ್‌ಕುಮಾರ್ ದೇಸಾಯಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಬಿಇಒ ಮಲ್ಲಿಕಾರ್ಜುನ ಮಾತನಾಡಿದರು. ಸಮಾರಂಭದಲ್ಲಿ ನಾಗಪ್ಪ ಹೊರಪೇಟೆ, ಬಸಪ್ಪ ಗದ್ದಿ, ರಾಜಕುಮಾರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement