ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳು
ದೇವದುರ್ಗ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ವಿಠೋಬ ನಾಯಕ ಸೋಮನಮರಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಮುಖ್ಯ ಚುನಾವಣಾಧಿಕಾರಿ ಬಾಲಪ್ಪ ಭಾವಿಮನಿ ತಿಳಿಸಿದ್ದಾರೆ.ತಾಲೂಕು ಘಟಕದ ಉಪಾಧ್ಯಕ್ಷರಾಗಿ ಮಹೆಬೂಬ ಅಲಿ ಗಬ್ಬೂರು, ರಾಜ್ಯ ಪರಿಷತ್ ಸದಸ್ಯರಾಗಿ ಮಲ್ಲಪ್ಪ ಡಿ. ಮುಂಡರಗಿ, ಕಾರ್ಯದರ್ಶಿಯಾಗಿ ಬಸವರಾಜ ಹೇಮನೂರು, ಶಿವರಾಜ ಕೆ. ಇರಬಗೇರಾ, ಸೂಗಪ್ಪ ಗೌಡ ಮದರಕಲ್ ಸೇರಿ ಆರು ಜನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ.