ಸಿಆರ್ಪಿ ಶಿವಶಂಕರ್ ಬೀಳ್ಕೊಡುಗೆ ಸಮಾರಂಭ
ಲಿಂಗಸ್ಗೂರು: ಶಿಕ್ಷಣ ಇಲಾಖೆಯಲ್ಲಿ ಸಿಆರ್ಪಿಯಾಗಿ ಮೂರು ವರ್ಷ ಕರ್ತವ್ಯ ನಿರ್ವಹಿಸಿದ ಶಿವಶಂಕರ ಪಾಟೀಲರಿಗೆ ಬೀಳ್ಕೊಡಲಾಯಿತು.ತಾಲೂಕಿನ ಕಸಬಾ ಲಿಂಗಸ್ಗೂರು ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಶಿವಶಂಕರ ಪಾಟೀಲರಿಗೆ ಹೊನ್ನಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಆರ್ಪಿ ರುದ್ರಮುನಿ ಗೊರೇಬಾಳ, ಮುಖ್ಯ ಶಿಕ್ಷಕ ಬಸವರಾಜ ಕರಡಿ, ಶಿಕ್ಷಕರಾದ ಮಹಾಂತಗೌಡ, ಬಸಮ್ಮ, ಮೀನಾ ಕುಮಾರಿ, ಕವಿತಾ, ಫರ್ದಾನ್ ಬೇಗಂ ಸೇರಿದಂತೆ ಇದ್ದರು.