ಆದರ್ಶ ಅಳವಡಿಸಿಕೊಂಡರೆ ಅಪರಾಧ ಕಡಿತ: ಡಿವೈಎಸ್ಪಿ
ಸಿಂಧನೂರು: ದೂರದರ್ಶನ, ಮೊಬೈಲ್, ಇಂಟರ್ನೆಟ್ಗಳಿಗೆ ಮಾರು ಹೋಗಿರುವ ಯುವ ಪೀಳಿಗೆ ಮನಸ್ಸು ವಿಚಲಿತಗೊಂಡು ಅಪರಾಧಕ್ಕೆ ಪ್ರಚೋದನೆ ನೀಡುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಮೌಲ್ಯ, ಆದರ್ಶಗಳನ್ನು ಮೈಗೂಡಿಸಿದಾಗ ಅಪರಾಧಕ್ಕೆ ತಡೆ ಹಾಕಬಹುದು ಎಂದು ಲಿಂಗಸ್ಗೂರು ಡಿವೈಎಸ್ಪಿ ಅನಿತಾ ಹದ್ದಣ್ಣನವರ್ ಹೇಳಿದರು.
ನಗರದ ಸತ್ಯಾಗಾರ್ಡನ್ನ್ನಲ್ಲಿ ಸಂಕೇತ್ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಕೇತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಬಸವರಾಜ ಮಾತನಾಡಿದರು. ತಾ. ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಚುಸಾಪ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಸಂಕೇತ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಅನಿಲರಾಜ್ ಮಾತನಾಡಿದರು. ನಗರಸಭಾ ಸದಸ್ಯೆ ಸುಮಂಗಲಾ ಮಲ್ಲಿಕಾರ್ಜುನಗೌಡ, ಪ್ರಾಚಾರ್ಯ ಪ್ರಕಾಶ ಎಸ್. ಹಚ್ಚೋಳ್ಳಿ, ಪಿಯು ಕಾಲೇಜಿನ ಪ್ರಾಚಾರ್ಯ ಶ್ರೀಧರ ಬಿ. ಕುಲ್ಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಚನ್ನಮಲ್ಲಿಕಾರ್ಜುನ, ವಿಶ್ವನಾಥ ಪಾಟೀಲ್ ಇದ್ದರು. ಸನ್ಮಾನ: ಕಳೆದ ವರ್ಷ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.