ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಯಾಳಗಿ

Rashmi Kasaragodu
Updated On : 29 Jul 2014, 10:38 am

ಸಿಂಧನೂರು: ವಿದ್ಯಾರ್ಥಿಗಳು ಸತತ ಶ್ರದ್ಧೆ ಮತ್ತು ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಮಾನ್ವಿಯ ಸಾಹಿತಿ ರಮೇಶಬಾಬು ಯಾಳಗಿ ಅಭಿಪ್ರಾಯಪಟ್ಟರು. ನಗರದ ಅನಿಕೇತನ ಸ್ವತಂತ್ರ ಪಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತಿನ ದಾರ್ಶನಿಕರು ಮತ್ತು ಶ್ರೇಷ್ಠ ವ್ಯಕ್ತಿಗಳೆಂದು ಹೆಸರು ಪಡೆದ ಅನೇಕರು ಅತ್ಯಂತ ಬಡತನ ಮತ್ತು ಪರಿಶ್ರಮದಿಂದ ಸಾಧಕರಾಗಿದ್ದಾರೆ. ಜ್ಞಾನ ಯಾರೊಬ್ಬರಿಗೂ ಮೀಸಲಾಗಿಲ್ಲ. ಪರಿಶ್ರಮದಿಂದ ಮಾತ್ರ ಲಭ್ಯವಾಗುತ್ತದೆ ಎಂದರು.
ವೆಂಕಟೇಶ್ವರ ಪ್ರೌಢಶಾಲಾ ಶಿಕ್ಷಕ ವೆಂಕನಗೌಡ ವಟಗಲ್ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿಗಳ ಪರಿಶ್ರಮವನ್ನು ನಿರಂತರ ನೆನಪಿನಲ್ಲಿಟ್ಟುಕೊಂಡು ಅಧ್ಯಯನ ಶೀಲರಾಗುವಂತೆ ಸಲಹೆ ನೀಡಿದರು. ಪೋತ್ನಾಳ ಸೇಂಟ್ ಝಕಾರಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರುದ್ರಪ್ಪ ಮಾತನಾಡಿ, ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ವಿದ್ಯಾರ್ಥಿಗಳೇ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗುತ್ತದೆ ಎಂದರು.
ಪ್ರಾಚಾರ್ಯ ವೈ.ಎಚ್. ರಕ್ಕಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಈರಮ್ಮ, ಜ್ಯೋತೆಮ್ಮ, ನಿಂಗಮ್ಮ, ಶರಣಬಸವ, ಜಯಲಕ್ಷ್ಮೀ, ತ್ರಿವೇಣಿ, ಗೀತಾ, ಸಿದ್ದಪ್ಪ, ರಂಜಿತಾ, ಮುದುಕಪ್ಪ, ಸಬಿನಾಬಾನು ಅವರನ್ನು ಸನ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement