ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೀನಾಕ್ಷಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

Lingaraj Badiger
Updated On : 30 Jul 2014, 11:42 am

ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ಮೀನಾಕ್ಷಿ ಪಬ್ಲಿಕ್ ಶಾಲೆಯಲ್ಲಿ ಕೀರ್ತಿ ಹಾಗೂ ಕಿಡ್ಜೀ ಶಾಲೆಗಳ ಆಶ್ರಯದಲ್ಲಿ 15ನೇ ಕಾರ್ಗಿಲ್ ವಿಜಯೋತ್ಸವವನ್ನು ಶಾಲೆಯ ವಿದ್ಯಾರ್ಥಿಗಳು, ಆಡಳಿತ ವರ್ಗ ಹಾಗೂ ಶಿಕ್ಷಕ ವೃಂದವು ಮೇಣದ ಬತ್ತಿಯನ್ನು ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ತ್ಯಾಗ ಬಲಿದಾನ ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿತು.
ಶಾಲೆಯ ಆಡಳಿತಾಧಿಕಾರಿ ಚಂದ್ರಕಲಾ ಪ್ರಕಾಶ್ ಮಾತನಾಡಿ, 1999ರ ಯುದ್ಧದಲ್ಲಿ ಭಾಗವಹಿಸಿ ವಿಜಯದಲ್ಲಿ ತಮ್ಮದೇ ಕೊಡುಗೆ ನೀಡಿದ ಅವರ ಸಹೋದರ ಈಗ ಕರ್ನಲ್ ಆಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಲೋಹಿತ್ ಕೀರ್ತಿ ಹಾಗೂ ಅವರ ಸ್ನೇಹಿತ ವೆಂಕಟೇಶ ಕುಲಕರ್ಣಿ ಅವರನ್ನು ನೆನೆದು ಭಾವುಕರಾಗಿ ಮಕ್ಕಳಿಗೆ ಸೇನೆಯ ಮಹತ್ವ ಮತ್ತು ದೇಶ ಸೇವೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ್ ಕೀರ್ತಿ ಮಾತನಾಡಿ, ವೀರಯೋಧರ ತ್ಯಾಗದ ಮನೋಭಾವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಲ್ಲಿ ಮುಂದಿನ ಭವ್ಯ ಭಾರತವನ್ನು ನಿರ್ಮಿಸಬಹುದು.
ಪಾಕಿಸ್ತಾನದ ಕುತಂತ್ರದ ಯುದ್ಧಕ್ಕೆ ತಕ್ಕ ಉತ್ತರ ನೀಡಿದ ನಮ್ಮ ಯೋಧರು ನಿಜಕ್ಕೂ ಭಾರತಾಂಬೆಯ ಹೆಮ್ಮೆಯ ಪುತ್ರರು ಎಂದರು.  ಸಂಸ್ಥೆಯ ನಿರ್ದೇಶಕ ಪ್ರಕಾಶ್ ಝುಂಜುರವಾಡ, ಮುಖ್ಯೋಪಾದ್ಯಾಯ ವೇಣುಗೋಪಾಲ್, ಶಿಕ್ಷಕರಾದ ರಮೇಶ ಉಪಸ್ಥಿತರಿದ್ದರು. ಶಿಕ್ಷಕ ವೀರೇಶ ನಿರೂಪಿಸಿದರು, ಶಿಕ್ಷಕಿ ಅನ್ನಪೂರ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement