ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಾಲೆರೆಯೋಣ ಬನ್ನಿ ನಾಗಪ್ಪಗ

Mainashree
Updated On : 1 Aug 2014, 10:38 am

ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಜು.31
ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಗುರುವಾರ ಶ್ರದ್ಧಾ- ಭಕ್ತಿಪೂರ್ವಕವಾಗಿ ಸಂಭ್ರಮದಿಂದ ಆಚರಿಸಿದರು. ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರಸಿದ್ಧವಾದ ನಾಗರ ಪಂಚಮಿ ಪ್ರಮುಖ ವಿಶೇಷವೆಂದರೆ ಜೋಳ, ಮೆಕ್ಕೆಜೋಳದಿಂದ ತಯಾರಿಸಿದ ಅಳ್ಳು(ಪಾಪ್ ಕಾರ್ನ್) ಹಾಗೂ ಹೆಸರು, ಎಳ್ಳು, ನವಣೆ, ಸಜ್ಜೆ, ಪುಟಾಣಿ, ಬೇಸನ್ ಸೇರಿದಂತೆ ವಿವಿಧ ಬಗೆಯ ಉಂಡಿಗಳು, ಗೋದಿಯ ಹುಗ್ಗಿ, ಕಡಲೆ ಕಾಳಿನ ತಿನಿಸುಗಳನ್ನು ಮಡಿಯಿಂದ ನೈವೇದ್ಯ ತಯಾರಿಸುತ್ತಾರೆ. ಅರಳೆಯ ಅಂಗನೂಲು ತಯಾರಿಸಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲದ ಹಾಲು ಹಾಕಿ ಅದರಿಂದ ನಾಗದೇವತೆಗೆ ಹಾಲನೆರೆದು ಭಕ್ತಿ ಸಮರ್ಪಿಸುವ ದೃಶ್ಯ ಸಾಮಾನ್ಯವಾಗಿತ್ತು.
ನಾಗದೇವತೆಗೆ ಹಾಲನೆರೆದರು: ನಾಗರ ಪಂಚಮಿ ನಿಮಿತ್ತ ಪಟ್ಟಣದ ಮಹಾಲಕ್ಷ್ಮೀ, ಈಶ್ವರ, ನಗರೇಶ್ವರ, ದೊಡ್ಡ ಹನುಮಂತ, ಯಲ್ಲಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧೆಡೆ ನಾಗದೇವತೆಯನ್ನು ಪ್ರತಿಷ್ಠಾಪಿಸಿದ ಸ್ಥಳಗಳಿಗೆ ಮಹಿಳೆಯರು ಹಾಗೂ ಮಕ್ಕಳು ತೆರಳಿ ನಾಗದೇವತೆಗೆ ಬೆಲ್ಲದ ಹಾಲನೆರೆದು ಆರೋಗ್ಯ, ಶಾಂತಿ, ನೆಮ್ಮದಿ ನೀಡೆಂದು ಭಕ್ತಿಯಿಂದ ಬೇಡಿಕೊಳ್ಳುವ ದೃಶ್ಯ ಕಂಡುಬಂದವು. ಶುಕ್ರವಾರ ನಾಗಪಂಚಮಿ ದಿನದಂದು ತಿಂಡಿ- ತಿನಿಸುಗಳ ಸಮೇತ ತೆರಳಿ ನಾಗದೇವತೆಗೆ ಕೊಬ್ಬರಿ ಬಟ್ಟಲಿನಲ್ಲಿ ಹಸುವಿನ ಹಾಲು ಹಾಕಿ ನಾಗದೇವತೆಗೆ ಹಾಲನೆರೆದು ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ.
ಸಂಭ್ರಮ: ಉತ್ತರ ಕರ್ನಾಟಕ ಭಾಗದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿ ಅಂಗವಾಗಿ ಮನೆಗಳಲ್ಲಿ ವಾರಗಟ್ಟಲೆ ಜೋಕಾಲಿ ಹಾಕಿ ಮಹಿಳೆಯರು ಜನಪದ ಹಾಡುಗಳನ್ನು ಪರಸ್ಪರ ಸವಾಲಿನಿಂದ ಹಾಡುವುದು, ವಿವಿಧ ಬಗೆಯ ಉಂಡಿಗಳು, ತಿಂಡಿ ತಿನಿಸುಗಳನ್ನು ಮನೆಮನೆಗೆ ತೆರಳಿ ಹಂಚುವುದು, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು, ಜೂಜು ಆಡುವ ಮೂಲಕ ಹಬ್ಬದ ಹಿರಿಮೆ- ಗರಿಮೆಗಳನ್ನು ತೋರ್ಪಡಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement