ಜಂಗೀರಾಂಪುರ ತಾಂಡಾ: ದುರ್ಗಾದೇವಿ ದೇವಸ್ಥಾನ ಉದ್ಘಾಟನೆ
ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಜೂ.2
ತಾಲೂಕಿನ ಜಂಗೀರಾಂಪುರ ತಾಂಡಾದಲ್ಲಿ ನೂತನ ದುರ್ಗಾದೇವಿ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಹಾಗೂ ಗದ್ದೆಮ್ಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ಜರುಗಿತು.
ದೇವರಗಡ್ಡಿ ದೇವಸ್ಥಾನದಿಂದ ಭಾನುವಾರ ಸಂಜೆ ಗದ್ದೆಮ್ಮ ದೇವಿ ಮೂರ್ತಿಯನ್ನು ಜಂಗೀರಾಂಪುರ ತಾಂಡಾಕ್ಕೆ ಸಂಗೀತ ವಾದ್ಯಗಳ ಸಮೇತ ತರಲಾಯಿತು. ಸೋಮವಾರ ಬೆಳಗ್ಗೆ 7 ಗಂಟೆಗೆ 33 ಕಳಸಗಳ ಸಮೇತ ಗಂಗಾ ಸ್ಥಳ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಧಾರ್ಮಿಕ ಸಮಾರಂಭ ಜರುಗಿತು. ಸಂಜೆ ದುರ್ಗಾದೇವಿ ಹಾಗೂ ಗದ್ದೆಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು. ನಂತರ ರಾತ್ರಿ ಭಜನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಅಂಕಲಿಮಠದ ಶ್ರೀಗಳು, ಶಾಸಕ ಮಾನಪ್ಪ ವಜ್ಜಲ್, ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜೀವಲಪ್ಪ ನಾಯ್ಕ, ಮುಖಂಡರಾದ ಈರಣ್ಣ ನಾಯ್ಕ, ಧನಶೆಟ್ಟಿ ಹಳಪ್ಪ, ಪುಲ್ಲಪ್ಪ ಶಿಕ್ಷಕರು, ಗ್ರಾಪಂ ಸದಸ್ಯ ಶೇಠೆಪ್ಪ, ಅಮರಪ್ಪ, ಪೂರಪ್ಪ ಪೂಜಾರಿ, ಲಾಲಪ್ಪ ಪೂಜಾರಿ, ಲಾಲಸಿಂಗಪ್ಪ ಪೂಜಾರಿ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.