ಪಡಿತರ ವ್ಯವಸ್ಥೆ: ಗ್ರಾಹಕ ಸ್ನೇಹಿ ಮಾಹಿತಿಗೆ ಕ್ರಮ
ರಾಯಚೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಗ್ರಾಹಕರಿಗಾಗಿ ಮಾಹಿತಿ ನೀಡಿಕೆ ಸಂಬಂಧಿಸಿ ಮೂರು ಹೊಸ ಮೊಬೈಲ್ ಸೇವೆಗಳನ್ನು ಆರಂಭಿಸಿದ್ದು, ಗ್ರಾಹಕರು ಪ್ರಯೋಜನ ಪಡೆಯಲು ಮನವಿ ಮಾಡಿದೆ.
ಗ್ರಾಹಕರು ತಮ್ಮ ಪಡಿತರ ಸ್ಥಿತಿಗತಿಗಳಿಗಾಗಿ ಮೊಬೈಲ್ ಮೂಲಕ ಖಈಖಖಿಆಖಿ ಎಂದು ನಮೂದಿಸಿ ಒಂದು ಸ್ಥಳ ಬಿಟ್ಟು ಆರರ್ಸಿ ಎಂದು ಬರೆದು ಕಾರ್ಡಿನ ಸಂಖ್ಯೆ ನಮೂದಿಸಿ ಮೊಬೈಲ್ ಸಂಖ್ಯೆ 9212357123ಗೆ ಎಸ್ ಎಂ ಎಸ್ ಕಳುಹಿಸಿದಲ್ಲಿ ಪಡಿತರ ಚೀಟಿಯ ಸ್ಥಿತಿ ತಿಳಿಯುತ್ತದೆ ಎಂದು ಇಲಾಖೆ ತಿಳಿಸಿದೆ.
ಅದೇ ರೀತಿ ಆಹಾರ ಧಾನ್ಯಗಳ ಹಂಚಿಕೆ ಕುರಿತು ಮಾಹಿತಿಗೆ ಖಈಉಆಔಕಖಿ ಖಈ ಎಂದು ನಮೂದಿಸಿ ಕಾರ್ಡಿನ ಸಂಖ್ಯೆ ನಮೂದಿಸಿ 9212357123 ಗೆ ಎಸ್ಎಂಎಸ್ ಕಳಿಸಿದಲ್ಲಿ ಹಂಚಿಕೆ ಮಾಹಿತಿ ಲಭ್ಯವಾಗಲಿದೆ. ಇನ್ನು ತಮ್ಮ ಪಡಿತರ ಚೀಟಿಯನ್ನು ಯಾವ ನ್ಯಾಯಬೆಲೆ ಅಂಗಡಿಗೆ ಜೋಡಿಸಲಾಗಿದೆ ಎಂದು ತಿಳಿದುಕೊಳ್ಳಲು ಖಈಖಏಕಕಿ ಎಂದು ನಮೂದಿಸಿ ಒಂದು ಸ್ಪೇಸ್ ಬಿಟ್ಟು ಆ ನ್ಯಾಯಬೆಲೆ ಅಂಗಡಿಯ ಯಾವುದೇ ಒಂದು ರೇಶನ್ ಕಾರ್ಡಿನ ಸಂಖ್ಯೆ ನಮೂದಿಸಿ ಮೇಲಿನ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳಿಸಿದಲ್ಲಿ ಪಡಿತರ ಚೀಟಿಯನ್ನು ಯಾವ ರೇಶನ್ ಅಂಗಡಿಗೆ ಜೋಡಿಸಲಾಗಿದೆ ಎಂದು ಸಂದೇಶ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.