ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಆರೋಗ್ಯಕ್ಕೆ ಶುದ್ಧ ನೀರು ಮುಖ್ಯ'

Mainashree
Updated On : 7 Jun 2014, 10:14 am

ಲಿಂಗಸ್ಗೂರು: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರ ಸೇವನೆ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ ಹೇಳಿದರು. ಸ್ಥಳೀಯ ತಾಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾರ್ವಜನಿಕ ಆರೋಗ್ಯ-ನೈರ್ಮಲ್ಯ-ಕುಡಿಯುವ ನೀರು ನಿರ್ವಹಣೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕುರಿತು ಆಯ್ದ ಪ್ರತಿನಿಧಿಗಳಿಗೆ ಒಂದು ದಿನದ ಆರೋಗ್ಯ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸುಗಮ: ಇಂದಿನ ಬಿಡುವಿಲ್ಲದ ಬದುಕಿನಲ್ಲಿ ಆರೋಗ್ಯ ಉತ್ತಮವಾಗಿದ್ದರೆ ಕೆಲಸ ಕಾರ್ಯಗಳು ಸುಗಮವಾಗಲಿವೆ. ತಾಲೂಕಿನಲ್ಲಿ ಕೆಲ ಗ್ರಾಮಗಳಲ್ಲಿ ಆರ್ಸೆನಿಕ್, ಫ್ಲೋರೈಡ್ ಅಂಶವುಳ್ಳ ನೀರು ದೊರೆಯುವ ಪರಿಣಾಮ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಸರ್ಕಾರ ಶುದ್ಧ ಕುಡಿಯುವ ನೀರು ಪೂರೈಸಲು ಪ್ರಯತ್ನ ನಡೆಸಿದೆ ಎಂದರು. ಸಿಎಸ್‌ಡಿ ಎನ್‌ಜಿಒ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎನ್.ಎಸ್. ರಾಮಮೂರ್ತಿ, ಜನಾರೋಗ್ಯ-ನೈರ್ಮಲ್ಯ-ಕುಡಿಯುವ ನೀರಿನ ನಿರ್ವಹಣೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕುರಿತ ಮಾಹಿತಿ ನೀಡುತ್ತಾ, ಮಾನವನು ಶಾರೀರಿಕ, ಸಾಮಾಜಿಕ, ಮಾನಸಿಕ, ಸಂತುಷ್ಟನಾಗಿರುವ ಸ್ಥಿತಿ ಎಂದು ಪರಿಗಣಿಸಲಾಗಿದೆ. ಆಹಾರದ ಕೊರತೆ, ಅಪೌಷ್ಟಿಕ ಆಹಾರ, ದೋಷಪೂರಿತ ಆಹಾರ, ಅನೈರ್ಮಲ್ಯ ವಾತಾವರಣದಲ್ಲಿ ಆಹಾರ ತಯಾರಿಕೆ ಮತ್ತು ವಿತರಣೆ, ಕ್ರಿಮಿ ಕೀಟಗಳು ಹಾಗೂ ರೋಗಾಣುಪೀಡಿತ ಆಹಾರ ಪದಾರ್ಥಗಳು, ವಿಷಪೂರಿತ ರಾಸಾಯನಿಕ, ಅಸುದ್ಧ ಸೊಂಕುಗ್ರಸ್ಥ ಕುಡಿವ ನೀರು, ಪ್ರದೂಷಿತ ಗಾಳಿ ಮೂಲಕ ಹರಡುವ ರೋಗಕಾರಕ ವೈರಸ್ ಸೊಂಕು, ರೋಗವಾಹಕ ಕೀಟ-ಪ್ರಾಣಿಗಳು, ಸಂಪರ್ಕದಿಂದ ಹರಡುವ ರೋಗಗಳು ಶಾರೀರಿಕ ಆರೋಗ್ಯಕ್ಕೆ ಅಡ್ಡಿ ಮತ್ತು ಆತಂಕಗಳಿಗೆ ಕಾರಣವಾಗಿವೆ ಎಂದರು.
ಆರೋಗ್ಯಪೂರಕ: ಮನೆ, ಶಾಲೆ, ಕಾಲೇಜು, ಕಚೇರಿ, ಬಸ್ ನಿಲ್ದಾಣ, ಚಿತ್ರ ಮಂದಿರ, ಸಾರ್ವಜನಿಕ ಸ್ಥಳ, ಪಟ್ಟಣ ಪಂಚಾಯ್ತಿ, ಪುರಸಭೆ ಹಾಗೂ ಗ್ರಾಪಂಗಳ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಅಭ್ಯಾಸ ವ್ಯವಸ್ಥೆ ಜನಾರೋಗ್ಯಕ್ಕೆ ಪೂರಕವಾಗಿವೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಸುರಕ್ಷತಾಧಿಕಾರಿ ಪರಮೇಶ್ವರಯ್ಯ ಕಲ್ಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ತಾಪಂ ಸಿಬ್ಬಂದಿ ಕುಲ್ಕರ್ಣಿ, ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ ಕೊಂಪಲ್ ಸೇರಿದಂತೆ ಇದ್ದರು. ಎನ್‌ಜಿಒ ಸಂಸ್ಥೆಯಿಂದ ದಿನ ಆಹಾರ ಪದಾರ್ಥ, ದವಸ ಧಾನ್ಯ, ಸಿಹಿ ತಿನಸು, ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳು ಗುಣಮಟ್ಟ ಕಂಡು ಹಿಡಿಯುವ ಕುರಿತು ಪ್ರಾಯೋಗಿಕವಾಗಿ ಜಾಗೃತಿ ಮೂಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement