ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ದಸಂಸ ರಾಜ್ಯಮಟ್ಟದ ಮಹಾಧಿವೇಶನ

Mainashree
Updated On : 9 Jun 2014, 11:53 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜೂ.8
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯಿಂದ ದಸಂಸ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಅವರ 76ನೇ ಜನ್ಮದಿನಾಚರಣೆ ಸಂದರ್ಭ ನಗರದಲ್ಲಿ ಜೂ. 9 ಮತ್ತು 10ರಂದು ರಾಜ್ಯಮಟ್ಟದ ಸರ್ವಸದಸ್ಯರ ಮಹಾಧಿವೇಶನ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜೂ.9ರಂದು ಬೆಳಗ್ಗೆ 11ಕ್ಕೆ ದಲಿತ ಚೇತನ ಪ್ರೊ. ಬಿ.ಕೃಷ್ಣಪ್ಪ ಅವರ 76ನೇ ಜನ್ಮದಿನಾಚರಣೆ ಮತ್ತು ಮಹಾಧಿವೇಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ದಸಂಸ ಸಂವಿಧಾನ ಪುಸ್ತಕವನ್ನು ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ ಬಿಡುಗಡೆಗೊಳಿಸಲಿದ್ದಾರೆಂದು ಹೇಳಿದರು.
ಪ್ರಶಸ್ತಿ ಪ್ರದಾನ: ಮುಖ್ಯ ಅತಿಥಿಗಳಾಗಿ ಅಲ್ಲಮಪ್ರಭು ಬೆಟ್ಟದೂರು, ರುದ್ರಪ್ಪ ಹನಗವಾಡಿ, ಬಾಬು ಭಂಡಾರಿಗಲ್, ಜಯ ದೇವಿ ಗಾಯಕವಾಡ್ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಪ್ರೊ.ಬಿ. ಕೃಷ್ಣಪ್ಪ ಪ್ರಶಸ್ತಿಯನ್ನು ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ ಹಾಗೂ ಗಂಗಮ್ಮ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ರೂಪುರೇಷೆ: ದಲಿತ ಸಂಘರ್ಷ ಸಮಿತಿಯ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದ ಅವರು, ಜೂ.10ರಂದು ಬೆಳಗ್ಗೆ 11ಕ್ಕೆ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಸರ್ವಸದಸ್ಯರ ಮಹಾಧಿವೇಶನ ನಡೆಯಲಿದೆ. ಇಲ್ಲಿ ದಸಂಸ ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟದ ರೂಪುರೇಷೆ ಸಿದ್ಧಗೊಳಿಸಲಿದೆ ಎಂದರು.
ಬೆಂಬಲವಿಲ್ಲ: ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಘಟನೆಯಿಂದ ಕಾಂಗ್ರೆಸ್ ಬೆಂಬಲಿಸಲಾಗಿತ್ತು. ಹಾಗೆಂದ ಮಾತ್ರಕ್ಕೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಸಂಘಟನೆಯು ಕಾಂಗ್ರೆಸ್‌ನ್ನೇ ಬೆಂಬಲಿಸಲಿದೆ ಎಂದಲ್ಲ ಎಂದು ತಿಳಿಸಿದರು.
ಸದಾಶಿವ ವರದಿ: ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿ ನ್ಯಾ.ಸದಾಶಿವ ಆಯೋಗವು ನೀಡಿದ ವರದಿ ತೀರಾ ಅವೈಜ್ಞಾನಿಕವಾಗಿದೆ. ಆ ವರದಿ ಜಾರಿ ಸಮಂಜಸವಲ್ಲ. ಸದ್ಯ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಲ್ಲ ಜಾತಿಗಳ ಜನಸಂಖ್ಯೆ ಗಣತಿಗೆ ಮುಂದಾಗಿದ್ದು, ಈ ನಂತರವಷ್ಟೇ ಒಳಮೀಸಲಾತಿಗೆ ಸಂಬಂಧಿಸಿ ಕೂಲಂಕಷ ಪರಿಶೀಲಿಸಿ ವರದಿ ಸಿದ್ಧಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಂಪೂರ್ಣ ಒಪ್ಪಲಾಗದು. ಈ ಹಿಂದೆ ಧರಂಸಿಂಗ್ ಅವರು ರಾಜ್ಯದ ಸಿಎಂ ಆಗಿದ್ದ ವೇಳೆ, ಜಾರಿಗೆ ತಂದಿದ್ದ ಆಯೋಗವು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವರದಿ ಸಲ್ಲಿಸಿದೆ.  6.50ಲಕ್ಷ ಜನರು ಆಯೋಗದ ಎದುರು ತಮ್ಮ ಜಾತಿ ಯಾವುದು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಆದರೂ ವರದಿ ಸರ್ಕಾರಕ್ಕೆ ತರಾತುರಿಯಲ್ಲಿ ಸಲ್ಲಿಸಿದ್ದು, ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಒಳಮೀಸಲಾತಿ ಕಲ್ಪಿಸುವುದು ಅವಶ್ಯಕ ಎಂದರು.
ಗೊಂದಲ: ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಒಡಕಿಗೆ ಚಳವಳಿಯ ಹೆಸರಿನಲ್ಲಿ ಬೇರೆ ಬೇರೆ ಸಂಘಟನೆಗಳಾಗಿರುವುದೇ ಕಾರಣ. ಅದರಿಂದ ಮೂಲ ಸಂಘಟನೆಯ ಆಶಯಕ್ಕೆ ಧಕ್ಕೆಯಾಗಲಿದೆ. ಪರಿಶಿಷ್ಟ ಜಾತಿ ವರ್ಗಗಳ ಉಪಜಾತಿಗಳ ವಿವಿಧ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿರುವುದೂ ಈ ಸಮಸ್ಯೆಗೆ ದಾರಿ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಭರದಲ್ಲಿ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಇನ್ನುಳಿದಂತೆ ದಲಿತರ ಮೇಲೆ ದೌರ್ಜನ್ಯಗಳು ನಡೆದಾಗಲೆಲ್ಲ ಎಲ್ಲರೂ ಒಗ್ಗೂಡಿ ಹೋರಾಡುತ್ತಿರುವುದಾಗಿ ತಿಳಿಸಿದರು. ಸಂಘಟನೆಯ ಪ್ರಮುಖರಾದ ನಾಗತಿಹಳ್ಳಿ ನಾಗರಾಜ್, ರಮೇಶ್ ಡಾಕುಳಗಿ, ದುರುಗಪ್ಪ ಮೇಗಳಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement