ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧರ್ಮಾಚರಣೆಯಿಂದ ವಿಶ್ವಶಾಂತಿ

Vishwanath S
Updated On : 11 Jun 2014, 11:35 am

ರಾಯಚೂರು: ಧರ್ಮದ ಆಚರಣೆಯಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಧರ್ಮಾಧಾರಿತ ಬದುಕೇ ನಿಜವಾದ ಬದುಕು ಎಂದು ಶ್ರೀಕಾಶಿ ಜಗದ್ಗುರುಗಳಾದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಪೂರತಿಪ್ಲಿ ಗ್ರಾಮದಲ್ಲಿ ಮಂಗಳವಾರ ಸಾವಿರ ದೇವರ ಸಂಸ್ಥಾನ ಮಠ ಬಿಚ್ಚಾಲಿ, ಮಟಮಾರಿ ಗಬ್ಬೂರಿನ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಕಾಶಿ ಜಗದ್ಗುರುಗಳ ಪೀಠಾರೋಹಣದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ನೆಮ್ಮದಿಯ ಬದುಕಿಗೆ ಧರ್ಮವೇ ಮೂಲವಾಗಿದೆ ಎಂದರು.
ಧರ್ಮಾನುಷ್ಠಾನದಲ್ಲಿ ಜಪವೇ ಅತೀ ಶ್ರೇಷ್ಠವಾದುದಾಗಿದೆ. ಅದರಲ್ಲೂ ಸರ್ವರಿಗೂ ಸುಲಭವಾದ ಮಂತ್ರಗಳಲ್ಲಿ ಪಂಚಾಕ್ಷರಿ ಮಹಾಮಂತ್ರವೇ ಅತೀ ಶ್ರೇಷ್ಠವಾದದ್ದಾಗಿದೆ. ಈ ಮಹಾಮಂತ್ರವನ್ನು ಜಪಿಸಿದಲ್ಲಿ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾವಿರ ದೇವರ ಸಂಸ್ಥಾನ ಮಠ ಬಿಚ್ಚಾಲಿ, ಮಟಮಾರಿ, ಗಬ್ಬೂರಿನ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ರಾಯಚೂರಿನ ಸೋಮವಾರಪೇಟೆಯ ಹಿರೇಮಠದ ರಾಚೋಟಿವೀರ ಶಿವಾ ಚಾರ್ಯರು, ಮಾನವಿ ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯರು, ನೀಲಗಲ್‌ನ ಬ್ರಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಶ್ರೀಕಾಶಿ ಜಗದ್ಗುರುಗಳು ರಚಿಸಿದ ಸಿದ್ಧಾಂತ ಶಿಖಾಮಣಿಯ ಗ್ರಂಥವನು ಬಿಡುಗಡೆಗೊಳಿಸಲಾಯಿತು.ಇದಕ್ಕೂ ಮೊದಲು ಗ್ರಾಮದಲ್ಲಿ ಕಾಶಿ ಜಗದ್ಗುರುಗಳನ್ನು ಪಲ್ಲಕ್ಕಿಯಲ್ಲಿ ಸಮಾರಂಭ ಸ್ಥಳಕ್ಕೆ ಕರೆತರಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರು, ಗ್ರಾಮದ ಪ್ರಮುಖರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement