ಮಹಿಳೆಯರ ಪತ್ತೆಗೆ ಬಿಜೆಪಿ ಒತ್ತಾಯ
ರಾಯಚೂರು: ರಾಜ್ಯದಲ್ಲಿ ಇದುವರೆಗೆ ಕಾಣೆಯಾದ ಯುವತಿಯರು ಹಾಗೂ ಮಹಿಳೆಯರ ಪತ್ತೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ದಿನವೂ 10ರಿಂದ 20 ಜನ ಮಹಿಳೆಯರು, ಯುವತಿಯರು ಕಾಣೆಯಾಗುತ್ತಿದ್ದಾರೆ. 2010ರಿಂದ 2013ರವರೆಗೆ 24663 ಮಹಿಳೆಯರು ರಾಜ್ಯದಲ್ಲಿ ಕಾಣೆಯಾಗಿದ್ದಾರೆ. ಮಹಿಳೆಯರನ್ನು ಅಪಹರಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಇಂಥ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು. ಮಹಿಳೆಯರ ಹಾಗೂ ಯುವತಿಯರ ಕಾಣೆಯಂಥ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆಗೆ ವ್ಯಾಪಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.