ಐಟಿಐ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರವೇಶಕ್ಕೆ ಕರೆ
ರಾಯಚೂರು: 2014-15ನೇ ಸಾಲಿಗೆ 2 ವರ್ಷಗಳ ಐಟಿಐ ವಿವಿಧ ಟ್ರೇಡ್ಗಳಲ್ಲಿ ತೇರ್ಗಡೆಯಾದ ಅರ್ಹರಿಂದ 3ನೇ ಸೆಮಿಸ್ಟರ್ ಡಿಪ್ಲೊಮಾ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ವಿವಿಧ ಟ್ರೇಡ್ ಗಳಲ್ಲಿ ಐಟಿಐ ಪಾಸಾದವರು ಅರ್ಜಿಗಳನ್ನು ವೆಬ್ಸೈಟ್ ವಿಳಾಸ ಢಿಢಿಢಿ.ಜಡ್ಛಿ.್ಞಛ್ಠ.ಟ್ಝ್ಛಿ.್ಝಟಿ, ಢಿಢಿಢಿ.ಜಡಿಜ.್ಞಛ್ಠಟಿಛಡಿಛ್ಞಛ.್ಝಟಿ, ಮತ್ತು ಢಿಢಿಢಿ.ಉ್ಝಠಟ್ಟಟಛಛಜ್ಝಟ್ಝಡಡ್ಝ್ಟಟಿ.್ಝಟಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿಗಳೊಂದಿಗೆ ಎಸ್ಸೆಸ್ಸೆಲ್ಸಿ, ಐಟಿಐ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರಮಾಣ ಪತ್ರ ಇನ್ನಿತರೆ ದಾಖಲೆಗಳ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಎಸ್ಸಿ ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 50 ಹಾಗೂ ಇತರರಿಗೆ 100 ರಾಜ್ಯದ ಯಾವುದೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಯಿಂದ ಉಳಿತಾಯ ಖಾತೆ ಚಾಲನ್ ಪಡೆದು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಉಳಿತಾಯ ಖಾತೆ ಸಂಖ್ಯೆ- 64097386381ಗೆ ಶುಲ್ಕ ಪಾವತಿಸಿ ಕೌಂಟರ್ ಫೈಲನ್ನು ಪಡೆದು ಅರ್ಜಿ ಜತೆಗೆ ಕಡ್ಡಾಯವಾಗಿ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯರನ್ನು ಸಂಪರ್ಕಿಸಲು ಕೋರಲಾಗಿದೆ.