ಮಟ್ಟೂರ ಬೆಂಬಲಿಸಿ
ಸಿಂಧನೂರು: ಈಶಾನ್ಯ ವಲಯ ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಶರಣಪ್ಪ ಮಟ್ಟೂರ ಅವರನ್ನು ಬೆಂಬಲಿಸುವಂತೆ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ಅಹ್ಮದ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಶಿಕ್ಷಕರ ಸ್ನೇಹಿ, ಶಿಕ್ಷಕ ಪರ ಹೋರಾಟಗಾರರಾದ ಮಟ್ಟೂರವರು ಶಿಕ್ಷಕರಿಗೆ ಕುಂದುಕೊರತೆ ಉಂಟಾದಾಗ ಹೋರಾಟ ಮಾಡುವ ಸ್ಥೈರ್ಯ ಹೊಂದಿದ್ದಾರೆ. ಇವರನ್ನು ಆಯ್ಕೆಯಾಗಿಸಿ ವಿಧಾನ ಪರಿಷತ್‌ಗೆ ಕಳುಹಿಸಿದರೆ ಶಿಕ್ಷಕರಿಗೆ ಸೂಕ್ತ ಸೌಲಭ್ಯ ವ್ಯವಸ್ಥೆ ಕಲ್ಪಿಸುವಿಕೆ, ಶಿಕ್ಷಕರಿಗೆ ವೇತನ ತಾರತಮ್ಯದಲ್ಲಿ ಯಾವುದೇ ಗೊಂದಲ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಮಾಡುವರು. ಆದ್ದರಿಂದ ಶಿಕ್ಷಕರು ಮಟ್ಟೂರವರಿಗೆ ಮತ ಹಾಕುವಂತೆ ವಿನಂತಿಸಿದ್ದಾರೆ.