ಶರಣಪ್ಪ ಮಟ್ಟೂರು ಪರ ಶಾಸಕರ ಮತಯಾಚನೆ
ದೇವದುರ್ಗ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಶಾಸಕ ವೆಂಕಟೇಶ ನಾಯಕ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಪರ ಬುಧವಾರ ಮತ ಯಾಚಿಸಿದರು.
ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಯಾಚಿಸಿದ ಅವರು, ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವದುರ್ಗ ತಾಲೂಕಿನ ಅರಕೇರಾ, ಜಾಲಹಳ್ಳಿ, ಗಬ್ಬೂರು, ಸುಂಕೇಶ್ವಹಾಳ, ಮಸರಕಲ್ ಸೇರಿ ಹಲವು ಗ್ರಾಮಗಳಲ್ಲಿ ಮತಯಾಚಿಸಿದ್ದು, ಪಕ್ಷವನ್ನು ಬೆಂಬಲಿಸುವುದಾಗಿ ಶಿಕ್ಷಕರು ಭರವಸೆ ನೀಡಿದ್ದಾರೆಂದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಅರಕೇರಾ ವಿಭಾಗದ ಅಧ್ಯಕ್ಷ ಬಸಯ್ಯ ಶಾಖೆ, ತಾಪಂ ಸದಸ್ಯ ಸತ್ಯನಾರಾಯಣ ನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಹುಸೇನ್ ಸಾಬ್ ನಿಲವಂಜಿ ಸೇರಿ ಅನೇಕರಿದ್ದರು