ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಿಯು ಪ್ರವೇಶ: ಪೋಷಕರಿಗೆ ಸೂಚನೆ

Rashmi Kasaragodu
Updated On : 20 Jun 2014, 12:18 pm

ರಾಯಚೂರು: ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ವಿವಿಧ ಸಂಸ್ಥೆಗಳ ಅಡಿಯಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಿದ್ದು, ಪ್ರವೇಶ ಪಡೆಯುವ ಮುನ್ನ ಪಾಲಕರು ಪರಿಶೀಲಿಸುವಂತೆ ಡಿಡಿಪಿಯು ಕಚೇರಿ ತಿಳಿಸಿದೆ. ಪದವಿ ಪೂರ್ವ ಇಲಾಖೆ ಅನುಮತಿ ಪಡೆಯದೇ ಆರಂಭಗೊಂಡ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಾರದು. ಪೋಷಕರು, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ಮುನ್ನ ಪರಿಶೀಲಿಸಬೇಕು. ಪ್ರವೇಶ ಪಡೆದಲ್ಲಿ ಮುಂದಿನ ಹಾಗು- ಹೋಗುಗಳಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳೇ ಹೊಣೆಯಾಗುತ್ತಾರೆಂದು ಪ.ಪೂ.  ಶಿಕ್ಷಣ ಇಲಾಖೆ ಎಚ್ಚರಿಸಿದೆ.  ಹೆಚ್ಚಿನ ಮಾಹಿತಿಗೆ ಕಾಲೇಜುಗಳ ವಿವರಕ್ಕೆ ಸಂಬಂಧಿಸಿ ಡಿಡಿಪಿಯು ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.


ಸಂಸದ ಖರ್ಗೆ ಪ್ರವಾಸ
ಗುಲ್ಬರ್ಗ: ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ಜೂ. 19, 20ರಂದು ನಗರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೂ. 21ರ ಬೆಳಗ್ಗೆ 7ಕ್ಕೆ ಸೇಡಂಗೆ ಪ್ರಯಾಣಿಸುವರು. ಮಧ್ಯಾಹ್ನ 1 ತೆಲಂಗಾಣ ಖಮ್ಮಂ ಗ್ರಾಮದಲ್ಲಿ ರಾಜೀವ್ ಗಾಂಧಿ ಮೂರ್ತಿ ಅನಾವರಣ ಮಾಡುವರು. ರಾತ್ರಿ 8.15ಕ್ಕೆ ಹೈದ್ರಾಬಾದಿನಲ್ಲಿ ವಾಸ್ತವ್ಯ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement