ರಸ್ತೆ ಅಗಲೀಕರಣಕ್ಕೆ ಅಳತೆ
ಲಿಂಗಸ್ಗೂರು: ಪಟ್ಟಣದ ಗಡಿಯಾರ್ ಚೌಕ್‌ದಿಂದ ಸರ್ಕಾರಿ ತೋಟದವರೆಗಿನ ರಸ್ತೆ ಅಗಲೀಕರಣಕ್ಕೆ ಮಾರ್ಕೌಟ್ ಮಾಡಲಾಯಿತು. ಮುಖ್ಯಮಂತ್ರಿ ಅಭಿವೃದ್ಧಿ ಅನುದಾನದಲ್ಲಿ ನಗರೋತ್ಥಾನ ಯೋಜನೆಯಡಿ 1.80 ಕೋಟಿ ಮಂಜೂರಾಗಿದ್ದು, ಪಟ್ಟಣದ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಹಾಯಕ ಆಯುಕ್ತರು ನೀಡಿದ ಆದೇಶದ ಮೇರೆಗೆ ಕಾರ್ಯ ಆರಂಭಿಸಲಾಗಿದೆ. ರಸ್ತೆ ಬದಿಯ ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗಿದಉ್‌ದು, ಸ್ವಯಂ ಪ್ರೇರಿತರಾಗಿ ತೆರವು ಕಾರ್ಯ ಕೈಗೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.