ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೀರಿ ಮನೆಗೆ ಖರ್ಗೆ ಭೇಟಿ

Rashmi Kasaragodu
Updated On : 21 Jun 2014, 11:48 am

ಜೇವರ್ಗಿ: ಪಟ್ಟಣದಲ್ಲಿ ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಬಸವಣೆಪ್ಪ ಸಾಹು ಸೀರಿಯವರ ಮನೆಗೆ ಭೇಟಿ ನೀಡಿದ ಕೇಂದ್ರದ ಮಾಜಿ ಸಚಿವ ಹಾಗೂ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಅಲ್ಲಮಪ್ರಭು ಪಾಟೀಲ್, ಚನ್ನಾರೆಡ್ಡಿ ಪಾಟೀಲ್, ಬಸವರಾಜ ಭೀಮಳ್ಳಿ, ಶಿವಶರಣಪ್ಪ ಸೀರಿ, ರಾಜಶೇಖರ ಸೀರಿ ಇದ್ದರು.



ವಿಶ್ವ ರಕ್ತದಾನಿಗಳ ದಿನಾಚರಣೆ ಇಂದು
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಜೂ.21ರಂದು ಬೆಳಗ್ಗೆ 9ಕ್ಕೆ ವಿಶ್ವ ರಕ್ತದಾನಿಗಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಬೆಳಗ್ಗೆ 10.30ಕ್ಕೆ ಗುಲ್ಬರ್ಗದ ಆರೋಗ್ಯ ನಿರೀಕ್ಷಕರ ಸಭಾ ಕೋಣೆಯಲ್ಲಿ ಜಿಲ್ಲಾ ಶಾಸ್ತ್ರಜ್ಞೆ ಡಾ. ಜಿ. ನಳಿನಿ ನಮೋಶಿ ರಕ್ತದಾನಿಗಳಿಗೆ ಆಯೋಜಿಸಿರುವ ಸನ್ಮಾನ ಸಮಾರಂಭ ಉದ್ಘಾಟಿಸುರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸುವರು. ವೈದ್ಯಾಧಿಕಾರಿ ಡಾ. ಶಾಲಿನ ಸಜ್ಜನಶೆಟ್ಟಿ ಅತಿಥಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement