ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಪೈಪ್ ತೆರವು ಕಾರ್ಯಾಚರಣೆ ಸ್ಥಗಿತ

Rashmi Kasaragodu
Updated On : 23 Jun 2014, 11:20 am

ಮಸ್ಕಿ: ಇಲ್ಲಿಗೆ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ 55ನೇ ಉಪಕಾಲುವೆಯಿಂದ ರೈತರು ಅಕ್ರಮ ಪೈಪ್ ಅಳವಡಿಸಿ ನೀರು ಪಡೆಯುವುದನ್ನು ತಡೆಯಲು ಮುಂದಾದ ನೀರಾವರಿ ಅಧಿಕಾರಿಗಳಿಗೆ ರೈತರು ವಿರೋಧಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಪ್ರಸಂಗ ಶನಿವಾರ ರಾತ್ರಿ ನಡೆಯಿತು. ಎಡದಂಡೆ ಕಾಲುವೆಯ 55ನೇ ಉಪ ಕಾಲುವೆಯಲ್ಲಿ ಶನಿವಾರ ರಾತ್ರಿ ಸುಮಾರು 10ರ ಸುಮಾರಿಗೆ ಜೆಸಿಬಿ ಯಂತ್ರ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ನೀರಾವರಿ ಅಧಿಕಾರಿಗಳು ಪೈಪ್‌ಗಳ ತೆರವು ಕಾರ್ಯಕ್ಕೆ ಮುಂದಾದ ಸಿಂಧನೂರಿನ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರರ ಹನುಮಂತಪ್ಪ ಅವರೊಂದಿಗೆ ರೈತರು ವಾಗ್ವಾದಕ್ಕಿಳಿದರು.
ಕಾರ್ಯಾಚರಣೆಗೆ ಅಡ್ಡಿ: ಈಗಾಗಲೇ ಇಲ್ಲಿನ ಅಕ್ರಮವಾಗಿ ಅಳವಡಿಸಿದ್ದ ಎಲ್ಲ ಪೈಪ್‌ಗಳನ್ನು ತೆರವುಗೊಳಿಸಿದ್ದು, ತಾವು ಅಳವಡಿಸಿದ ಪೈಪ್‌ಗಳು ಅಕ್ರಮವಲ್ಲ ಎಂದು ಆಕ್ಷೇಪಿಸಿ ನೀರಾವರಿ ಇಲಾಖೆಯ ವಾಹನಗಳ ಟೈರ್‌ನ ಗಾಳಿಯನ್ನು ಹೊರಬಿಟ್ಟು ಪ್ರತಿಭಟಿಸಿದರು. ನೀರಾವರಿ ಅಧಿಕಾರಿಗಳ ಹಾಗೂ ರೈತರ ವಾಗ್ವಾದ ತಡರಾತ್ರಿ 2ರವರೆಗೂ ನಡೆಯಿತು. ಕೊನೆಗೆ ಪ್ರತಿಭಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತೆರವು ಕಾರ್ಯ ಕೈಬಿಟ್ಟು ಮರಳಿದರು. ಬಳಗಾನೂರು ಪಿಎಸ್‌ಐ ಮಹಾಂತೇಶ ಸಜ್ಜನ್ ರೈತರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಸ್ಕಿಯ ಪ್ರಭಾರಿ ಕಾರ್ಯನಿವಾಹಕ ಅಭಿಯಂತರ ಗೋವರ್ಧನ ಮತ್ತಿತರರಿದ್ದರು. ನೂರಾರು ರೈತರು ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement