ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಂಗಕಲೆ ರಕ್ಷಿಸಿ

Rashmi Kasaragodu
Updated On : 23 Jun 2014, 11:21 am

ಸಿಂಧನೂರು: ದಕ್ಷಿಣ ಕನ್ನಡದಲ್ಲಿ ಯಕ್ಷಗಾನದಂತೆ ಈ ಭಾಗದಲ್ಲಿ ಬಯಲಾಟ, ದೊಡ್ಡಾಟ ಹಾಗೂ ದಪ್ಪಿನಾಟಗಳಂತಹ ಕಲೆಗಳನ್ನು ರಕ್ಷಿಸುವ ಕಾರ್ಯವಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.
ನಗರದ ದುದ್ದುಪೂಡಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಮಾರಂಭದ ಪೂರ್ವ ಸಭೆಯಲ್ಲಿ ಮಾತನಾಡಿ, ನನೆಗುದಿಗೆ ಬಿದ್ದಿರುವ ನಗರದ ರಂಗಮಂದಿರವನ್ನು ಕೂಡಲೇ ಪೂರ್ಣಗೊಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಮುಕ್ತಾಯ ಸಮಾರಂಭದಲ್ಲಿ ಉದ್ಘಾಟನೆಗೊಳಿಸಲು ಪ್ರಯತ್ನಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆ, ಅದರಲ್ಲೂ ಬಯಲಾಟ ಹಾಗೂ ದೊಡ್ಡಾಟಗಳ ಕಲೆಯನ್ನು ಉಳಿಸಿ, ಬೆಳೆಸಿ ಆ ಕಲೆಯನ್ನು ಶ್ರೀಮಂತಗೊಳಿಸುವ ಮಹತ್ವದ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು ಮಾಡಬೇಕಾಗಿದೆ ಎಂದು ತಿಳಿಸಿದರು.
ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಿ: ಹಿರಿಯ ಸಾಹಿತಿ ಎಚ್.ಜಿ. ಹಂಪಣ್ಣ ಮಾತನಾಡಿ, ಶತಮಾನೋತ್ಸವ ವರ್ಷಾಚಾರಣೆಯಾಗಿರುವುದರಿಂದ ಪ್ರತಿ ತಿಂಗಳೂ ಉತ್ತಮವಾದ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಪರಿಷತ್ ಗೌರವ ಸಲಹೆಗಾರ ವೈ.ನರೇಂದ್ರನಾಥ ವರ್ಷದಲ್ಲಿ ಅತ್ಯುತ್ತಮ ನಾಲ್ಕು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಕನ್ನಡ ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆಯವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಪರಿಚಯ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ತಿಳಿಸಿದರು. ಜಿಲ್ಲಾ ಚುಸಾಪ ಅಧ್ಯಕ್ಷ ಬೀರಪ್ಪ ಶಂಭೋಜಿ ಶತಮಾನೋತ್ಸವ ಸಂಭ್ರಮದಲ್ಲಿ ತಾಲೂಕಿನ ನೂರುಜನ ಸಾಹಿತಿಗಳ, ಕಲಾವಿದರ ಮತ್ತು ಸಂಗೀತಗಾರರ ಪರಿಚಯದ ಪುಸ್ತಕ ಪ್ರಕಟಿಸಬೇಕೆಂದು ತಿಳಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ದತ್ತಿದಾನಿ ನ್ಯಾಯವಾದಿ ಶರಣಬಸವ ವಲ್ಕಂದಿನ್ನಿ, ಎಚ್.ಬಸವರಾಜ ವಕೀಲರು, ನಗರಸಭೆ ಸದಸ್ಯೆ ಮಂಜುಳಾ ಪಾಟೀಲ್, ಕಸಾಪ ತಾಲೂಕು ಗೌರವ ಕೋಶಾಧ್ಯಕ್ಷ ಆರ್.ಸಿ.ಪಾಟೀಲ್, ಎನ್.ವಿ. ಜೋಶಿ, ಶ್ರೀಶೈಲ್ ಕೌದಿ, ಶಿವಾನಂದ ಸಾತಿಹಾಳ, ಶರಣಪ್ಪ ಟೆಂಗಿನಕಾಯಿ, ರಮಾದೇವಿ ಶಂಭೋಜಿ ಶತಮಾನೋತ್ಸವ ಕಾರ್ಯಕ್ರಮ ಕುರಿತು ಅಭಿಪ್ರಾಯ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement