ಸಿಸಿ ರಸ್ತೆ ಕಾಮಗಾರಿಗೆ ಬಾದರ್ಲಿ ಚಾಲನೆ
ಸಿಂಧನೂರು: ನಗರದ 1 ಮತ್ತು 2ನೇ ವಾರ್ಡ್ನಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆಯ ಕಾಮಗಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ ಅವರು, 2013- 14ನೇ ಸಾಲಿನ ಎಸ್ಎಫ್ಸಿ ಯೋಜನೆಡಿಯಲ್ಲಿ 10 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿ ಕೈಗೊಂಡಿದ್ದು ಗುಣಮಟ್ಟದ ರಸ್ತೆಯನ್ನು ಮಾಡಿಸಿ ವಾರ್ಡ್ನ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಗುತ್ತೇದಾರರಿಗೆ ಸಲಹೆ ನೀಡಿದರು. ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ, ನಯೋಪ್ರಾ ಅಧ್ಯಕ್ಷ ಎಸ್.ಶರಣೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ವಕೀಲ, ನಗರಸಭೆ ಸದಸ್ಯರಾದ ಶರಣಯ್ಯಸ್ವಾಮಿ, ನಬೀಸಾಬ್, ಪ್ರಭುರಾಜ, ವೆಂಕಟೇಶ ಇದ್ದರು.