ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಚೆಕ್ ವಿತರಣೆ
ಅಫಜಲ್ಪುರ: ಆಳಂದ ತಾಲೂಕಿನ ಕೂಡಲ ಹಂಗರಗಾ-ಆಳಂದ ರಸ್ತೆ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟ ಕುಡಿಗನೂರು ಗ್ರಾಮಸ್ಥರಿಗೆ ಶಾಸಕ ಮಾಲಿಕಯ್ಯ ಗುತ್ತೇದಾರ ಪರಿಹಾರ ಚೆಕ್ ವಿತರಿಸಿದರು.
ಅಪಘಾತದಲ್ಲಿ ಬಾಷಾ ತಂದೆ ಖಾಜಾಸಾಬ ಮುಲ್ಲಾ, ರೇಷ್ಮಾ ತಂದೆ ಖಾಜಾಸಾಬ ಮುಲ್ಲಾ, ಜನ್ನತ ಗಂಡ ಖಾಜಾಸಾಬ ಮುಲ್ಲಾ, ರಿಯಾನಾ ತಾಯಿ ಸೈಫನಮಾ ಎಂಬ ಒಂದೇ ಕುಟುಂಬದವರು ಮೃತಪಟ್ಟ ದುರ್ದೈವಿಗಳಾಗಿದ್ದು, ಶಾಸಕರು ತಲಾ 35 ಸಾವಿರ ಮೌಲ್ಯದ ಚೆಕ್ ಅನ್ನು ಕುಟುಂಬದ ಯಜಮಾನ ಬಾಷಾಸಾಬ ಮುಲ್ಲಾ ಅವರಿಗೆ ವಿತರಿಸಿದರು.
ಅದೇ ರೀತಿ ಉಡಚಾಣ ಗ್ರಾಮದಲ್ಲಿ ಅಕಾಲಿಕ ಮಳೆಯಲ್ಲಿ ಸಿಡಿಲು ಬಡಿದು ಮೃತಪಟ್ಟ ಕೇಶವರಾವ ತಂದೆ ಸುಭಾಷ, ಜಯಶ್ರೀ ಗಂಡ ದಿ. ಬಸವರಾಜ ಲೋಟೆ ಮತ್ತು ಇಂದಿರಾಬಾಯಿ ಗಂಡ ಕೃಷ್ಣಾ ಸಿಂಗಾಡೆ ಅವರ ಕುಟುಂಬಗಳಿಗೆ ತಲಾ 1.50 ಲಕ್ಷ ಮೌಲ್ಯದ ಚೆಕ್ ನೀಡಿದರು. ಇನ್ನೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ತಾಲೂಕಿನ ಗೊಬ್ಬೂರ(ಬಿ) ಗ್ರಾಮದ ಗುರುಪಾದಪ್ಪ ಜಿಎಫ್‌ಒ ಬೇಬಿ ವಿಶ್ವಪಾಲ ಅವರಿಗೆ 75 ಸಾವಿರ ಮೌಲ್ಯದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಿ.ವೈ. ಪಾಟೀಲ್, ತಹಸೀಲ್ದಾರ್ ಗೌಸುದ್ದಿನ್, ಕೆಎಸ್‌ಆರ್‌ಟಿಸಿ ಗುಲ್ಬರ್ಗದ ಲೆಕ್ಕಾಧಿಕಾರಿ ಬಸವಂತಪ್ಪ, ಅಫಜಲ್ಪುರ ಡಿಪೋ ವ್ಯವಸ್ಥಾಪಕ ವಿಠ್ಠಲ್‌ರಾವ ಕದಮ, ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ, ಪಪ್ಪು ಪಟೇಲ್, ಮಲ್ಲಿನಾಥ ಪಾಟೀಲ್, ರಾಜಶೇಖರ ಹಿರೇಮಠ, ಮಲ್ಲಿನಾಥ ಕುಂಬಾರ, ಸುಭಾಷ ವಾಲಿ ಸಿದ್ದಣ್ಣಗೌಡ ರೇವೂರ ಇದ್ದರು.